ಮಂಗಳೂರು: ನಟ ಪುನೀತ್ ರಾಜಕುಮಾರ್ ನಗರ ಪುತ್ಥಳಿ ಅನಾವರಣ

0
13

ಸುರಪುರ:ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ನಗರ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಸಲಾಯಿತು.ಗ್ರಾಮದಲ್ಲಿರುವ ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸಂಭ್ರಮದಿಂದ ಕಾರ್ಯಕ್ರಮವನ್ನು ನಡೆಸಿದರು.

ಪುನೀತ್ ರಾಜಕುಮಾರ್ ನಗರ ನಾಮಕರಣ ಹಾಗೂ ಪುತ್ಥಳಿ ಅನಾವರಣಗೊಳಿಸಿದ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಮಾತನಾಡಿ,ಕನ್ನಡ ಸಿನೆಮಾ ರಂಗದಲ್ಲಿ ಪುನೀತ್ ಅನ್ನುವ ಹೆಸರು ಅಜರಾಮರವಾಗಿ ಉಳಿದಿದೆ.ಅವರು ಕೇವಲ ಒಬ್ಬ ನಟ ಮಾತ್ರವಲ್ಲದೆ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿ ಎನ್ನುವಂತಿವೆ.ಇಂದು ಪ್ರತಿ ಗ್ರಾಮದಲ್ಲಿಯೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳನ್ನು ನಾವು ಕಾಣುತ್ತೇವೆ,ಅಂತಹ ಪುನೀತ್ ಅವರ ಬಗ್ಗೆ ಗ್ರಾಮದ ಎಲ್ಲರು ಅಭಿಮಾನಹೊಂದಿ ಇಂದು ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವುದು ಹೆಮ್ಮೆಯ ಸಂಗತಿಯಾಗಿದೆ ಜೊತೆಗೆ ಇಂದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖಂಡ ವಿಠ್ಠಲ್ ಯಾದವ್ ಮಾತನಾಡಿ,ದೇವರು ತುಂಬಾ ಕ್ರೂರಿ ಎನಿಸುತ್ತದೆ.ನಟ ಪುನೀತ್ ರಾಜಕುಮಾರ್ ಇನ್ನೂ ನೂರ್ಕಾಲ ನಮ್ಮೊಂದಿಗೆ ಇದ್ದು ಈ ಸಮಾಜದ ಸೇವೆ ಮಾಡಬೇಕಿತ್ತು,ಇಷ್ಟು ಬೇಗ ಅವರು ನಮ್ಮಿಂದ ದೂರ ಹೋಗಿರುವುದಕ್ಕೆ ತುಂಬಾ ಬೇಸರವಾಗುತ್ತದೆ,ಇಂದು ತಾವೆಲ್ಲರು ಪುನೀತ್ ರಾಜಕುಮಾರ್ ಅವರ ಹೆಸರನ್ನು ನಗರಕ್ಕೆ ಇಡುವುದರ ಜೊತೆಗೆ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವುದು ತುಂಬಾ ಸಂತೋಷದ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಗ್ರಾಮಕ್ಕೆ ಎಲ್ಲಾ ಮುಖಂಡರು ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.ನಂತರ ರಾಜಾ ವೇಣುಗೋಪಾಲ ನಾಯಕ ಪುತ್ಥಳಿ ಅನಾವರಣಗೊಳಿಸಿದರು.ಇದೇ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಶಿವಲಿಂಗ ಹಸನಾಪುರ ಮಾತನಾಡಿದರು.ಹಣಮಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಜಾ ಸುಶಾಂತ ನಾಯಕ,ಬಲಭೀಮ ಯಾದವ್,ನಿಂಗರಾಜ ಬಾಚಿಮಟ್ಟಿ,ಭೀಮರಾಯ ಮೂಲಿಮನಿ,ಬೈಲಪ್ಪಗೌಡ ವಾಗಣಗೇರ,ನಿಂಗಣ್ಣ ಮಾವಿನಮಟ್ಟಿ,ತಿಪ್ಪಣ್ಣ ಶೆಳ್ಳಗಿ,ಎಮ್.ಪಟೇಲ್,ಭೀಮನಗೌಡ ಪಾಟೀಲ್,ಬಲಭೀಮಪ್ಪ ಪೂಜಾರಿ,ಮದನಪ್ಪ ದೊರೆ,ನಿಂಗನಗೌಡ ದೊಡ್ಮನಿ,ಹುಸೇನಭಾಷ ಹಾದಿಮನಿ,ಶರಣಬಸವ ಬಡಿಗೇರ,ಭೀಮರಾಯ ಕಂಬಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಮಲ್ಲನಗೌಡ ಪಾಟೀಲ್ ಸ್ವಾಗತಿಸಿದರು,ಶೇಖರ ಬಡಿಗೇರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here