ಕಲಬುರಗಿಯಲ್ಲಿ ಹಳಕಟ್ಟಿ ವಚನೋತ್ಸವ 8ನೇ ಸಮ್ಮೇಳನ ನಿರ್ಧಾರ: ಡಾ.ಪಾಟೀಲ

0
24

ಕಲಬುರಗಿ: ಬರುವ ಡಿಸೆಂಬರ 10 ಮತ್ತು11ರಂದು ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಹಳಕಟ್ಟಿ ರಾಷ್ಟ್ರೀಯ ವಚನ ಸಮ್ಮೇಳನವನ್ನು ಆಯೋಜಿಸಲಾಗುವದೆಂದು ಹಳಕಟ್ಟಿ ಪ್ರತಿಷ್ಟಾನದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಂ.ಪಾಟೀಲ ಘೋಷಿಸಿದರು.

ಕಲಬುರಗಿಯ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪೂರ್ವಭಾವಿ ಸಮ್ಮೇಳನದಲ್ಲಿ ಮಾತನಾಡಿ ಶರಣರ ವಚನಗಳನ್ನು‌ ಸಂಗ್ರಹಿಸಿ ಬಹು ದೊಡ್ಡ ಕೆಲಸ ಮಾಡಿದ ಪ ಗು ಹಳಕಟ್ಟಿಯವರ ಹೆಸರಲ್ಲಿ ಕಲಬುರಗಿಯಲ್ಲಿ ಐತಿಹಾಸಿಕ ಸಮ್ಮೇಳನ ಜರುಗಿಸಲು ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಅಧ್ಯಕ್ಷರು,ಉದ್ಯಮಿಗಳು ಸಹಕಾರ ನೀಡಿದರೆ ಮಹತ್ವದ ಸಮ್ಮೇಳನ ಆಗಬಹುದೆಂದರು.

Contact Your\'s Advertisement; 9902492681

ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲು ಸಾಮಾಜಿಕ ನ್ಯಾಯ ನೀಡಬೇಕು.ಕಲ್ಯಾಣ ಕರ್ನಾಟಕದ ವರೇ ಸಮ್ಮೇಳನಾಧ್ಯಕ್ಷರಾಗಬೇಕು,ಸ್ಮರಣ ಸಂಚಿಕೆ ಹೊರತರಲು ಸಮ್ಮೇಳನದ ಯಶಸ್ವಿಗೆ ಸದಾ ದುಡಿಯೋಣವೆಂದು ಮಹಿಳಾ ಗೋಷ್ಠಿ ಪ್ರತ್ಯೇಕ ಬೇಡ ಎಲ್ಲದರಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ‌ ಹೇಳಿದರು.

ಕವಿ ಡಾ.ನಾಗಪ್ಪ ಗೋಗಿಯವರು ವಚನ ಸಾಹಿತ್ಯದ ಚಿಂತನಾ ಗೋಷ್ಠಿ,ವಚನ ಹಾಡು,ಸಂಗೀತ ಮಧ್ಯದಲ್ಲಿರಲೆಂದರು.ಡಾ.ಹಣ ಮಂತ ಮೇಲಕೇರಿ ಅವರು ಹೆಚ್ಚು ಪ್ರಚಾರವಾಗ ಬೇಕು ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಮೀಸಲಾಗದೆ ರಾಜ್ಯದ ಜನ ಬರುವಂತಾಗಬೇಕು,ಆಧುನಿಕ‌ ವಚನಕಾರರಿಗೆ ಆದ್ಯತೆ ನೀಡಬೇಕೆಂದರು.ವಡ್ಡನಕೇರಿ ಪ್ರತಿಷ್ಠಾನದ ಡಾ.ಶರಣಬಸಪ್ಪ ವಡ್ಡನಕೇರಿ ಮಾತನಾಡಿ ಹಳಕಟ್ಟಿ ಅವರ ಅಭಿಮಾನಿ ಬಳಗ ದೊಡ್ಡದಿದೆ ಅವರನ್ನ ಹಾಗೂ ಇಲ್ಲಿಯ ಸಂಘ ಸಂಸ್ಥೆಯ ಅಧ್ಯಕ್ಷರನ್ನು ಸಂಪರ್ಕಿಸಿದರೆ ಹೆಚ್ಚು ಸಮ್ಮೇಳನಕ್ಕೆ ಅರ್ಥ ಬರುತ್ತದೆಂದರು.

‌‌‌‌‌ ಅರಸು ಪ್ರಶಸ್ತಿ‌ ಪುರಸ್ಕೃತ ಡಾ.ಚಿ.ಸಿ.ನಿಂಗಣ್ಣ ಮಾತನಾಡಿ ಈಗಾಗಲೇ ಮೇಲ್ವರ್ಗದವರೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ.ಅವರ ಹೊರತುಪಡಿಸಿ ಅಲಕ್ಷಿತ ಸಮುದಾಯ,ಸಾಮಾಜಿಕ‌ನ್ಯಾಯ ಕೊಡಬೇಕು, ವಚನ ಸಾಹಿತ್ಯದ ವೈಚಾರಿಕ ಚಿಂತನೆ ನಡೆಯಲಿ, ಡಾ.ಗಾಂಧೀಜಿ ಮೋಳಕೇರಿ ಅವರು ಸ್ಮರಣ ಸಂಚಿಕೆ ಅಂದವಾಗಿ ಅರ್ಥಪೂರ್ಣವಾಗಿ ಬರಲೆಂದರು . ಪರಿಸರವಾದಿ ಪ ಮನುಸಗರ ವಚನ ಸಾಹಿತ್ಯ ಚಿಂತನ ಮಂಥನೆಯಾಗಿ ಸಮ್ಮೇಳನ‌ ಯಶಸ್ವಿಯಾಗಲು ನನ್ನ ಸಹಕಾರವಿದೆಯೆಂದರು.

‌‌‌‌‌ ಡಾ.ಬಸವರಾಜ ದಯಾಸಾಗರ ಸ್ವಾಗತಿಸಿದರು ಖ್ಯಾತ ಕವಿ ಹಂಶಕವಿ ಪ್ರಾಸ್ತಾವಿಕ ಮಾತನಾಡಿ ಹಳಕಟ್ಟಿ ವಚನ ಸಮ್ಮೇಳನಕ್ಕೆ ತಮ್ಮ ಸಹಕಾರ ಅಗತ್ಯವೆಂದರು ತಮ್ಮ ಐವತ್ತೊಂದು ಆಧುನಿಕ ವಚನ ಸಂಪುಟಗಳ ಬಿಡುಗಡೆ ಇದೆ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ ಎಂದರು.

ಗುರಪ್ಪ ಪಾಟೀಲ ಮುತ್ತ್ಯಾ ಅವರು ಸ್ಮರಣ ಸಂಚಿಕೆಯ ಮುದ್ರಣಕ್ಕೆ ಧನಸಹಾಯ ಮಾಡುವೆ ಇದೊಂದು ಸಮ್ಮೇಳನ ಇತರರಿಗೆ ಮಾದರಿಯಾಗಲಿ ಎಂದರು ಸಾಂಸ್ಕೃತಿಕ ಪ್ರತಿಷ್ಠಾನಧ್ಯಕ್ಷ ಬಿ.ಎಚ್.ನಿರಗುಡಿ ಅಧ್ಯಕ್ಷತೆ ವಹಿಸಿ ಇದೊಂದು ವಿಶಿಷ್ಟಸಮ್ಮೇಳನವಾಗಿ ರಾಜ್ಯದ ಜನತೆ ನೋಡುವಂತಾಗಬೇಕು . ನಮ್ಮ ಸಹಕಾರ ಯಾವತ್ತಿಗೂಇರುತ್ತದೆಂದರು ಡಾ.ಹುಲ್ಲೆ ನಿರೂಪಿಸಿದರು ಮನೋಹರ ಮರಗುತ್ತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here