ಮಾಲೂರು: ಗಂಧದನಾಡು ಜನಪರ ವೇದಿಕೆ-ಗಜವೇ ಹಾಗೂ ರಾಂಪುರ ಗೆಳೆಯರ ಬಳಗದ ವತಿಯಿಂದ ಮಾಲೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಭಾನುವಾರ “ಉಚಿತ ಆರೋಗ್ಯ ತಪಾಸಣಾ ಶಿಬಿರ”ವನ್ನು ಆಯೋಜಿಸಲಾಗಿತ್ತು.
ಬೊಮ್ಮಸಂದ್ರದ ನಾರಾಯಣ ನೇತ್ರಾಲಯ, ಯಡವನಹಳ್ಳಿಯ ಆಕ್ಸ್ಫರ್ಡ್ ಆಸ್ಪತ್ರೆಯ ನುರಿತ ವೈದ್ಯರಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ನೀಡಲಾಯಿತು.
ಗಜವೇ ರಾಜ್ಯ ಸಹ-ಕಾರ್ಯದರ್ಶಿ ಜಗದೀಶ್ ಅರಸು ನೇತೃತ್ವದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ್ ಆರಾಧ್ಯ, ಶಿವು ಡೆವೆಲಪರ್ಸ್ ನ ಶಿವಕುಮಾರ್, ನಾರಾಯಣ ನೇತ್ರಾಲಯದ ವೈದ್ಯರಾದ ಡಾ. ಪ್ರಭಿತ, ಶಿಬಿರದ ವ್ಯವಸ್ಥಾಪಕರಾದ ನಿಜಾಮುದ್ದೀನ್, ಆಕ್ಸ್ಫರ್ಡ್ ಆಸ್ಪತ್ರೆ ವೈದ್ಯರಾದ ಡಾ. ಸಚಿನ್, ಶಿಬಿರ ಸಂಯೋಜಕರಾದ ರಘು, ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸ್ವಾಭಿಮಾನಿ ಸತೀಶ್, ಬೆಂ.ದ.ವಿ.ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅರ್ಜುನ್, ಆನೇಕಲ್ ವಿ.ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕೌಶಿಕ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಕೆಂಪಣ್ಣ, ಕುಡಿಯೊನೂರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ರೆಡ್ಡಿ, ರಾಂಪುರ ಗೆಳೆಯರ ಬಳಗದ ಪದಾಧಿಕಾರಿಗಳಾದ ಮಿಥುನ್ ರೆಡ್ಡಿ, ಶ್ರೀಕಾಂತ್ ರೆಡ್ಡಿ, ಚಂದ್ರಶೇಖರ್, ಸಾಗರ್, ಮುರುಗೇಶ್ ಸೇರಿದಂತೆ ಹಲವಾರು ಗ್ರಾಮಸ್ಥರಿದ್ದರು.