ಎಐಕೆಕೆಎಂಎಸ್‍ ಹೋರಾಟ ಯಶಸ್ವಿ

0
20

ಕಲಬುರಗಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಖಾತೆ ಮಾಡಿಕೊಡುವುದು, ರೈತರ ಮೇಲಿನ ಭೂಕಬಳಿಕೆ ಕೇಸುಗಳನ್ನು ವಾಪಸ್ ತೆಗೆದುಕೊಳ್ಳುವುದು ಹಾಗೂ ಇನ್ನಿತರ ಹಕ್ಕೊತ್ತಾಯಗಳನ್ನು ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಡಲಾಗುವುದು ಎಂದು ಸರ್ಕಾರದಅಧೀನ ಕಾರ್ಯದರ್ಶಿ ಎಐಕೆಕೆಎಂಎಸ್ ನಿಯೋಗಕ್ಕೆ ಭರವಸೆ ನೀಡಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿಜಮೀನನ್ನುಗುತ್ತಿಗೆಆಧಾರದಲ್ಲಿಕೊಡುವ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕು ಮತ್ತು ಬಗರ್ ಹುಕುಂ ಸಾಗುವಳಿದಾರಿಗೆ ಹಕ್ಕುಪತ್ರ ವಿತರಿಸಬೇಕುಎಂದು ಒತ್ತಾಯಿಸಿ ರಾಜ್ಯಮಟ್ಟದ ಹೋರಾಟದ ಭಾಗವಾಗಿವಿಧಾನಸೌಧ ಚಲೋ ಹೋರಾಟವನ್ನುಅಖಿಲ ಭಾರತರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ರಾಜ್ಯ ಸಮಿತಿಯು ಸಂಘಟಿಸಿತ್ತು.

Contact Your\'s Advertisement; 9902492681

“ಬಗರ್ ಹುಕುಂ ಸಾಗುವಳಿಯು ಭೂ ಕಬಳಿಕೆಯಲ್ಲ, ಬಂಡವಾಳಶಾಹಿಗಳು ಹಾಗೂ ಕಂಪೆನಿಗಳು ಭೂಮಿಯನ್ನು ಆಕ್ರಮಿಸಿಕೊಳ್ಳುವುದು ಭೂಕಬಳಿಕೆ.ಬಡರೈತರು ಭೂಮಿ ಕೇಳುವುದು ನೈತಿಕ ಹಕ್ಕು.ರೈತರುತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಬಡರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದಕರ್ತವ್ಯ” ಎಂದುಖ್ಯಾತ ಬಂಡಾಯ ಸಾಹಿತಿಅಲ್ಲಮಪ್ರಭು ಬೆಟ್ಟದೂರು ಬಗರ್ ಹುಕುಂ ಸಾಗುವಳಿದಾರರ ಹೋರಾಟದಲ್ಲಿ ರೈತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದರಾಜ್ಯಾಧ್ಯಕ್ಷ ಹೆಚ್.ವಿ.ದಿವಾಕರ್, ರಾಜ್ಯ ಕಾರ್ಯದರ್ಶಿಕೆ.ಉಮಾ, ಉಪಾಧ್ಯಕ್ಷಡಾ. ಟಿ.ಎಸ್.ಸುನೀತ್‍ಕುಮಾರ್ ಮಾತನಾಡಿ, ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಗೆ ಹಕ್ಕಪತ್ರವನ್ನು ನೀಡಬೇಕುಎಂದು ಆಗ್ರಹಿಸಿದರು.ಎಐಕೆಕೆಎಂಎಸ್‍ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್‍ಅಧ್ಯಕ್ಷತೆ ವಹಿಸಿದ್ದರು.ಕಲಬುರಗಿಜಿಲ್ಲೆಯಿಂದಲೂ ನೂರಾರುಜನ ಸಾಗುವಳಿದಾರ ರೈತರು ಸಹ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here