ಸಂಗೀತ ಎಲ್ಲಾ ಭಾಷೆ ಸಂಸ್ಕøತಿ ಮೀರಿದ್ದಾಗಿದೆ: ಶಿವಶರಣಯ್ಯ

0
6

ಸುರಪುರ: ನಗರದ ಸೂಗುರೇಶ್ವರ ದೇವಸ್ಥಾನದಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯ ಸಂಗೀತ ಕಲಾವಿದ ಶಿವಶರಣಯ್ಯ ಬಳ್ಳುಂಡಗಿಮಠ ಮಾತನಾಡಿ, ಸಂಗೀತವು ಭಾಷೆ ಮತ್ತು ಸಂಸ್ಕøತಿಯನ್ನು ಮೀರಿದ್ದು ಸಂಗೀತವನ್ನು ದೇವರ ಭಾಷೆ ಎಂದು ಕರೆಯಲಾಗುತ್ತದೆ ಸಂಗೀತವನ್ನು ಗಾಂಧರ್ವ ವೇದ ಎನ್ನುತ್ತಾರೆ ಗಂಧರ್ವರ ವಿದ್ಯೆಯಾದುದರಿಂದ ಇದಕ್ಕೆ ಈ ಹೆಸರು ಬಂದಿದೆ ಎಲ್ಲಾ ವಯೋಮಾನದವರನ್ನು ಬಂಧಿಸಿಡುವ ಶಕ್ತಿ ಸಂಗೀತಕ್ಕೆ ಇದೆ ಸಂಗೀತವು ಪ್ರತಿ ಹೃದಯವನ್ನು ಮುಟ್ಟುವ ಅದ್ಭುತ ಕಲೆ ಎಂದರು.

ಸಂಗೀತಕ್ಕೆ ತನ್ನದೇ ಆದ ವಿಶೇಷತೆ ಇದ್ದು ಇಡೀ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಗೀತ ಕಲೆ ಪ್ರಸಿದ್ಧವಾಗಿದೆ ನಮ್ಮ ದೇಶವು ಸಂಗೀತದ ತವರೂರು ಆಗಿದ್ದು ಹಲವಾರು ಸಂಗೀತದ ಶೈಲಿಗಳನ್ನು ಹೊಂದಿದೆ ಹಿಂದೂಸ್ಥಾನಿ, ಕರ್ನಾಟಕಿ ಸೇರಿದಂತೆ ಅನೇಕ ಪ್ರಕಾರಗಳ ಸಂಗೀತ ವಿಧಗಳಿವೆ ಎಂದು ತಿಳಿಸಿದ ಅವರು ಸಂಗೀತ ಮಾನವ ಸ್ವಭಾವಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ ಎಂದು ದೃಢಪಟ್ಟಿದೆ ಅನೇಕ ರೋಗಗಳು ಸಂಗೀತದಿಂದ ಗುಣವಾಗುತ್ತದೆ ಎಂದು ಅನೇಕರ ಅನುಭವದಿಂದ ಹೇಳುತ್ತಾರೆ ಸಂಗೀತದ ಮಾಧುರ್ಯವು ಮನುಷ್ಯನಲ್ಲಿರುವ ಸಂಕುತಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನು ಉಂಟು ಮಾಡುತ್ತದೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರದ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೆರವೇರಿತು, ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ, ಸಿದ್ದಯ್ಯಸ್ವಾಮಿ ಬಳ್ಳುಂಡಗಿಮಠ, ಪ್ರಾಣೇಶರಾವ ಕುಲಕರ್ಣಿ, ರಾಜಶೇಖರ ಗೆಜ್ಜಿ, ಸುರೇಶಬಾಬು ಅಂಬೂರೆ, ಉಮೇಶ ಯಾದವ್, ಮಹಾಂತೇಶ ಶಹಾಪುರಕರ, ಜಗದೀಶ ಮಾನು, ಕು.ದೀಪಿಕಾ, ಕು.ಭೂಮಿಕಾ, ಗುರುನಾಥರೆಡ್ಡಿ ಶೀಲವಂತ, ನೂರುಂದಯ್ಯಸ್ವಾಮಿ, ಶರಣಬಸವ ಕೊಂಗಂಡಿ, ಶ್ರೀಶೈಲ, ಗೌರಿ ಮಾನ್ವಿ, ಶ್ರೀದೇವಿ, ರಮೇಶ ಕುಲಕರ್ಣಿ ಹಾಗೂ ಅನೇಕ ಸಂಗೀತ ಕಲಾವಿದರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here