ಮನೆ ಮನೆಯಲ್ಲಿ ಕನ್ನಡ ಕನ್ನಡಧ್ವಜವನ್ನು ಹಾರಿಸಲು ಸಿದ್ಧಲಿಂಗ ಬಾಳಿ ಮನವಿ

0
12

ಶಹಾಬಾದ : ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡದಧ್ವಜವನ್ನು ತಮ್ಮ ಮನೆಯ ಮೇಲೆ ಹಾರಿಸಿ ಕನ್ನಡ ಪ್ರೇಮ ಮೆರೆಯುವುದರ ಮೂಲಕ ಅರ್ಥಪೂರ್ಣ ಆಚರಣೆ ಮಾಡಲು ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಕ.ಸಾ.ಪ ರಾಜ್ಯಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮನೆ ಮನೆ ಕನ್ನಡ ದ್ವಜ ಹಾರಿಸಲು ಕರೆ ನೀಡಿದ್ದಾರೆ. ಆ ಹಿನ್ನಲೆಯಲ್ಲಿ ಕ.ಸಾ.ಪ, ಕನ್ನಡಪರ ಸಂಘಟನೆಗಳು, ಹಾಗೂ ವಿವಿಧ ಸಂಘ ಸಂಸ್ಥೆಗಳು, ಸ್ವಸಹಾಯ ಸಂಘಗಳು,ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿಯೊಬ್ಬರೂ ಈ ಅಭಿಯಾನದ ಯಶಸ್ಸಿಗೆ ಕೈಜೋಡಿಸುವುದರ ಮೂಲಕ ನವೆಂಬರ ಒಂದರಂದು ಅತ್ಯಂತ ಸಂಭ್ರಮದಿಂದ ರಾಜ್ಯೋತ್ಸವವನ್ನು ಆಚರಿಸೋಣ.

Contact Your\'s Advertisement; 9902492681

ಆ ಹಿನ್ನಲೆಯಲ್ಲಿ ರಾವೂರ ಗ್ರಾಮದಲ್ಲಿ ವೈಯಕ್ತಿಕವಾಗಿ ನೂರು ಕನ್ನಡದ ದ್ವಜಗಳನ್ನು ನೀಡುತ್ತಿದ್ದೇನೆ. ಜೊತೆಗೆ ಕನ್ನಡ ಜಾಗೃತಿ ಜಾಥಾ ನಡೆಸಲಾಗುವುದು . ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಸಿದ್ಧಲಿಂಗ ದೇವರು ಹಾಗೂ ಗ್ರಾಮದ ಕನ್ನಡಾಭಿಮಾನಿಗಳು ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿದ್ದಾರೆ ಎಂದು ಸಿದ್ಧಲಿಂಗ ಬಾಳಿ ತಿಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here