ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಡಾ. ಪೆರ್ಲ ಅಭಿನಂದನೆ

0
19

ಕಲಬುರಗಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ನೂತನ ಸಂಸದರಾಗಿ ಆಯ್ಕೆ ಹೊಂದಿದ ವಿಧಾನ ಪರಿಷತ್ತಿನ ಮಾಜಿ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಲಬುರಗಿ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು ವಿಧಾನಸೌಧದಲ್ಲಿ ಶನಿವಾರ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ತನ್ನ ಇತ್ತೀಚೆಗಿನ ” ಮಧ್ಯಮ ಮಾರ್ಗ” ಕೃತಿಯನ್ನು ನೀಡಿ ಶುಭ ಹಾರೈಸಿದರು. ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯ ಶುದ್ಧ ನಡೆಯ ರಾಜಕಾರಣಿಯಾಗಿ ಹೆಸರು ಪಡೆದ ಕೋಟ ಕರಾವಳಿಯ ಮತ್ತು ನಾಡಿನ ಅಭಿವೃದ್ಧಿಗೆ ಎಂದು ಶುಭ ಕೋರಿದರು.

Contact Your\'s Advertisement; 9902492681

ತಮ್ಮಂತಹ ಹಿತೈಷಿಗಳ ಮತ್ತು ಮತದಾರರ ಹಾಗು ನಾಡಿನ ಜನತೆಯ ವಿಶ್ವಾಸವನ್ನು ಉಳಿಸಿ ಬೆಳೆಸುವ ಕೆಲಸ ಕಾರ್ಯಗಳಲ್ಲಿ ಮುಂದುವರಿಯುತ್ತೇ ನೆ ಎಂದು ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದರು.ಲೋಕಸಭಾಸದಸ್ಯರ ಜೊತೆ ಸಂಸದರ ಆಪ್ತರಾದ ವಿವೇಕ್ ಕೋಟ ಮತ್ತು ಗಣೇಶ್ ಶೆಣೈ ಜೊತೆಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here