ಗ್ರಾಮೀಣ ಪೊಲೀಸ್ ಠಾಣೆಯ ಕಾರ್ಯಾಚರಣೆ: ಐವರು ದರೋಡೆಕೊರರ ಬಂಧನ

0
290

ಕಲಬುರಗಿ: ಇಂದು ಕಲಬುರಗಿ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಹೊರವಲಯದ ಅಳಂದ ರಸ್ತೆಯಲ್ಲಿ ದರೋಡೆಗೆ ಹೊಂಚುಹಾಕುತ್ತಿದ ಐವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡು ಬಂಧಿಸಿದ್ದಾರೆ.

ಶಾಹಬಾಜಾರ ನಿವಾಸಿ ವಿರೇಶ್(25), ಮಲ್ಲಿಕಾರ್ಜುನ್(22) ಬಬ್ಲೂ (24), ಜಗತ್ ಸಿಂಗ್ (35) ಹಾಗೂ ಕರಣ ಬಂಧಿತ ಆರೋಪಿಗಳು. ಬಂಧಿತರೆಲ್ಲರು ಕಲಬುರಗಿ ನಗರದ ನಿವಾಸಿ ಎಂದು ಗುರುತಿಸಲಾಗಿದ್ದು, ಇಂದು ಅಳಂದ ರಸ್ತೆಯಲ್ಲಿ ಐವರು ಆರೋಪಿಗಳು ಮುಖಕ್ಕೆ ಕಪ್ಪು ಬಟ್ಟೆ ಹಾಕಿಕೊಂಡು ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಮಾಹಿತಿ ಪಡೆದ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ ಸೋಮಲಿಂಗ ಕಿರದಳ್ಳಿ ಅವರ ನೇತೃತ್ವದಲ್ಲಿ ರಚಿಸಿದ ತಂಡದ ಪಿಎಸ್.ಐ ಚಂದ್ರಶೇಖರ ತಿಗಡಿ, ಸಿಬ್ಬಂದಿ ಹುಸೇನ್ ಬಾಷಾ, ರಾಜಕುಮಾರ, ಕೇಶವ್, ಅಂಬಾಜಿ ಹಾಗೂ ಶರಣಗೌಡ ಅವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಒಂದು ಡ್ಯೂಟ್ ಹಾಗೂ ಹೀರೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here