ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆಯುರ್ವೇದ ದಿನಾಚರಣೆ ನಡೆಸಲಾಯಿತು.ದಿನಾಚರಣೆ ಅಂಗವಾಗಿ ಧನ್ವಂತರಿ ದೇವಿಯ ಭಾವಚಿತ್ರ ಪೂಜೆ ಹಾಗೂ ಸಾರ್ವಜನಿಕರಿಗೆ ಔಷಧಿ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆಯುರ್ವೇದ ವೈದ್ಯ ಡಾ. ಸಂಜೀವ ಕುಲಕರ್ಣಿ ಮಾತನಾಡಿ, 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಧನವಂತರಿ ದೇವರ ಜಯಂತಿ ಆಚರಿಸಲಾಗುತ್ತಿದೆ. ಆಯುರ್ವೇದ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು. ಅಲ್ಲದೆ ಆಯುರ್ವೇದ ಚಿಕಿತ್ಸೆಯು ಪುರಾತನ ಪದ್ಧತಿಯಾಗಿದೆ.
ಈ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ನೈಸರ್ಗಿಕದಲ್ಲಿ ದೊರೆಯುವ ಔಷಧ ಗಿಡಮೂಲಿಕೆಗಳಿಂದಲೇ ಮಾತ್ರೆ, ಔಷಧ ನೀಡಲಾಗುತ್ತದೆ. ಆಯುರ್ವೇದದಲ್ಲಿ ಎಲ್ಲ ರೋಗಗಳಿಗೂ ಮದ್ದು ಇದೆ. ಪ್ರತಿ ಮನೆಯಲ್ಲೂ ಆಯುರ್ವೇದ ಔಷಧ ಬಳಿಸಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಹೇಳಿದರು.
ಡಾ. ಪ್ರಿಯಾಂಕ ಮಾತನಾಡಿದರು. ದೇವರಗೋನಾಲ ಮೌನೇಶ್ವರ ದೇವಸ್ಥಾನ ಅರ್ಚಕ ಲಿಂಗಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಎಂ.ಟಿ ಮಾನಮ್ಮ ಹನುಮಂತಯ್ಯ ಅಧ್ಯಕ್ಷತೆವಹಿಸಿದ್ದರು. ಆಯುಷ್ ವೈದ್ಯ ಡಾ. ಇಮಾಮುದ್ದೀನ್, ಗ್ರಾಪಂ ಸದಸ್ಯರಾದ ಯಮುನಮ್ಮ ಬಸನಗೌಡ, ಬಸವರಾಜ ಕೋಟಿಗುಡ್ಡ, ಡಾ. ಮಹೇಶ ಮಹಾಮನಿ, ಪರಮಣ್ಣ ಇತರರಿದ್ದರು.