ಹಿರಿಯ ನ್ಯಾಯವಾದಿ ಎಸ್.ಎಮ್ ಕನಕರಡ್ಡಿ ನಿಧನ:ಗಣ್ಯರ ಶೋಕ

0
23

ಸುರಪುರ: ಇಲ್ಲಿಯ ನ್ಯಾಯಾಲಾಯದ ಹಿರಿಯ ನ್ಯಾಯವಾದಿ ಹಾಗೂ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರು ಆಗಿದ್ದ ಎಸ್.ಎಮ್ ಕನಕರಡ್ಡಿ ಅನಾರೋಗ್ಯ ದಿಂದ ನಿಧನರಾಗಿದ್ದಾರೆ.

75 ವರ್ಷದ ಎಸ್.ಎಮ್ ಕನಕರಡ್ಡಿಯವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸುರಪುರ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಹಾಗೂ ಅನೇಕ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಮತ್ತು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.ಇವರಿಗೆ ಇಬ್ಬರು ಗಂಡು ಮತ್ತು ಒಬ್ಬರು ಹೆಣ್ಣು ಮಗಳಿದ್ದು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

Contact Your\'s Advertisement; 9902492681

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,ಶುಕ್ರವಾರ ಮದ್ಹ್ಯಾನ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಅಂತ್ಯ ಸಂಸ್ಕಾರವನ್ನು ಹುಣಸಗಿ ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ಶನಿವಾರ ಮದ್ಹ್ಯಾನ ನಡೆಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿಸಲಾಗಿದೆ.

ನ್ಯಾಯವಾದಿ ಎಸ್.ಎಮ್ ಕನಕರಡ್ಡಿ ನಿಧನಕ್ಕೆ ಇಲ್ಲಿಯ ನ್ಯಾಯವಾದಿಗಳ ಸಂಘ,ತಾಲೂಕು ವೀರಶೈವ ಲಿಂಗಾಯತ ಸಮಿತಿ,ಅಖಿಲ ಭಾರತ ವೀರಶೈವ ಮಹಾಸಭಾ,ಶ್ರಿ ಬಸವೇಶ್ವರ ಪತ್ತಿನ ಸಹಕಾರ ಸಂಘ,ಪಬ್ಲಿಕ್ ರಿಕ್ರಿಯೇಷನ್ ಕ್ಲಬ್,ಕನ್ನಡ ಸಾಹಿತ್ಯ ಸಂಘ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಿರಿಯ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್,ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ರಾಜಾ ಮುಕುಂದ ನಾಯಕ ಸೇರಿದಂತೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here