ಸೇಡಂ: ಅಂಗವಿಕಲರಿಗೆ ನಿವೇಶನ ಖರೀದಿಸಲು ಅಗತ್ಯ ದಾಖಲಾತಿ ಸಲ್ಲಿಸಲು ಸೂಚನೆ

0
40

ಕಲಬುರಗಿ: 2022-23ನೇ ಸಾಲಿನ ನಗರೋತ್ಥಾನ ಯೋಜನೆಯಲ್ಲಿ ಅಂಗವಿಕಲರಿಗೆ ನಿವೇಶನ ಖರೀದಿಸಲು ಸಹಾಯಧನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು, ಆದರೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಯಾವುದೇ ದಾಖಲಾತಿಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಿಲ್ಲವಾದರಿಂದ 2022ರ ನವೆಂಬರ 7ರೊಳಗಾಗಿ ಸೇಡಂ ಪುರಸಭೆ ಕಾರ್ಯಾಲಯಕ್ಕೆ ಕೆಳಕಂಡ ದಾಖತಿಗಳನ್ನು ಸಲ್ಲಿಸಲು ಸೇಡಂ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿವೇಶನ ಖರೀದಿ ನೋಂದಣಿ ಅಥವಾ ಕರಾರು ಪತ್ರ, ನಿವೇಶನ/ ಮನೆ ಹೊಂದಿದರ ಕುರಿತು ಪ್ರಮಾಣ ಪತ್ರ, ಕಚ್ಚಾ ಮನೆಗಳನ್ನು ಪಕ್ಕಾ ಮನೆಗಳಾಗಿ ನಿರ್ಮಿಸಿಕೊಳ್ಳಲು ಮನೆಯ ದಾಖಲಾತಿ ಸಲ್ಲಿಸಬೇಕು ಎಂದು ಕೋರಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here