ಜಾತ್ರೆಯಲ್ಲಿ ಸಿಡಿಮದ್ದು ಸಿಡಿದು12 ಜನ ಗಾಯ: ಆಸ್ಪತ್ರೆಗೆ ದಾಖಲು

0
309

ಕಲಬುರಗಿ: ಇಲ್ಲಿನ ಹೊನ್ನಕಿರಣಗಿ ಗ್ರಾಮದಲ್ಲಿ ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿ ಮದ್ದು ಸಿಡಿದು 12 ಜನರಿಗೆ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಹೊನ್ನ ಕಿರಣಗಿ ಗ್ರಾಮದ ಬಸವೇಶ್ವರ ಚೌಕ್ ಬಳಿ ಭಗ್ನಗೊಂಡಿರುವ 15 ದೇವಿ ಮೂರ್ತಿಗಳ ಮರು ಪ್ರತಿಷ್ಟಾಪನೆ ವೇಳೆ ಮುಂದಾಗಿದ್ದ ವೇಳೆ ಮದ್ದು ಸಿಡಿಸಿ ಸಂಭ್ರಮಿಸೋದಕ್ಕೆ ಮುಂದಾಗಿದ್ದ ಅವಘಡ ನಡೆದಿದೆ.

Contact Your\'s Advertisement; 9902492681

ಮದ್ದು ಸಿಡಿದ ಬಳಿಕ ಬೆಂಕಿಯ ಕಿಡಿ ಪಕ್ಕದಲ್ಲೆ ಇಟ್ಟಿದ್ದ ಮದ್ದಿನ ಮೇಲೆ ಬಿದ್ದ ಪರಿಣಾಮ ಬ್ಲಾಸ್ಟ್ ಆಗಿದ್ದು, ಐದು ಕೆಜಿಯಷ್ಟು ಮದ್ದು ಬ್ಲಾಸ್ಟ್ ಆದ ಹಿನ್ಬಲೆ 12ಕ್ಕೂ ಹೆಚ್ಚು ಜನರು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ.

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡವರು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here