ಜ.6ರಿಂದ ಪ್ರಣವಾನಂದ ಸ್ವಾಮಿ ಪಾದಯಾತ್ರೆ

0
10

ಎಸ್ಸಿ-ಎಸ್ಟಿ ಸಮುದಾಯವರಿಗೆ ಮೀಸಲು ಪ್ರಮಾಣ ಹೆಚ್ಚಳ ಮಾಡಿದಂತೆ ಮಾಡಿರುವ ಬಿಜೆಪಿ ಸರ್ಕಾರ, ಸುಗ್ರೀವಾಜ್ಞೆ ಹೊರಡಿಸುವುದಾಗಿ ಹೇಳಿ, ಇತರರಿಗೆ ಪರೋಕ್ಷವಾಗಿ ಕೋರ್ಟ್ ಮೆಟ್ಟಿಲೇರಲು ತಯಾರು ಮಾಡಿದೆ. ಇದು ಬಿಜೆಪಿಯ ಒಡೆದು ಆಳುವ ನೀತಿಗೆ ಸ್ಪಷ್ಟ ನಿರ್ಧಶನ. ಜಾತಿ-ಜಾತಿ, ಧರ್ಮ-ಧರ್ಮ ನಡುವೆ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. -ಪ್ರಣವಾನಂದ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಶಕ್ತಿಪೀಠ ಪೀಠಾಧಿಪತಿ ಕರಡಿಹಾಳ.

ಕಲಬುರಗಿ: ಹಿಂದುಳಿದಿರುವ ಆರ್ಯ ಈಡಿಗ, ಬಿಲ್ಲವ ಇನ್ನಿತರ ಸಮುದಾಯದವರ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಈಡಿಗರನ್ನು ಪ್ರವರ್ಗ -1 ಕ್ಕೆ ಸೇರ್ಪಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳು ಸೇರಿದಂತೆ ಸಮುದಾಯ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.6 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರಡಿಹಾಳದ ಬ್ರಹ್ಮಶ್ರೀ ನಾರಾಯಣ ಶಕ್ತಿಪೀಠ ಪೀಠಾಧಿಪತಿ ಪೂಜ್ಯ ಪ್ರಣವಾನಂದ ಸ್ವಾಮಿ ತಿಳಿಸಿದರು.

Contact Your\'s Advertisement; 9902492681

ಸಮಾಜದ ಮುಖಂಡರ  ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸುವ ಸಮುದಾಯದ ಜನರೊಂದಿಗೆ  35 ದಿನಗಳ ಕಾಲ ಪಾದಯಾತ್ರೆಯನ್ನು ನಡೆಸಿದ ಬಳಿಕ ರಾಜಧಾನಿ  ಬೆಂಗಳೂರು ತಲುಪಿ ಫ್ರೀಡಂ ಪಾರ್ಕ್‍ನಲ್ಲಿ  ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು  ಹೇಳಿದರು.

ಜ.6 ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಪಾದಯಾತ್ರೆ ಶುರುವಾಗಿ, ಉಡುಪಿ, ಶಿವಮೊಗ್ಗ ಸೊರಬ,ಶಿಕಾರಿಪುರ, ಹಾಸನ, ತುಮಕೂರ ಜಿಲ್ಲೆ ಸೇರಿದಂತೆ 37 ವಿಧಾನ ಸಭಾ ಕ್ಷೇತ್ರಗಳಲ್ಲಿ ಹಾದು ಸುಮಾರು  658 ಕಿಮೀ ಪಾದಯಾತ್ರೆಯನ್ನು ಮಾಡಲಾಗುವುದು. ಪ್ರತಿದಿನ 20 ಕಿಮೀ ಪಾದಯಾತ್ರೆ ಸಾಗಲಿದೆ. ಸಮಾಜದ ಬೇಡಿಕೆ ಜತೆಗೆ ಹಿಂದುಳಿದ ವರ್ಗಗಳ ನಾಯಕರನ್ನು ಭೇಟಿ ಎಲ್ಲರನ್ನು ಒಂದುಗೂಡಿಸುವ ಮೂಲಕ ಹಿಂದುಳಿದ ವರ್ಗದವರೆಲ್ಲರು ಒಂದೇ ವೇದಿಕೆಯಡಿ ಸೇರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸತೀಶ ಗುತ್ತೇದಾರ, ವೆಂಕಟೇಶ ಕಡೆಚೂರು, ಮಹಾದೇವ ಗುತ್ತೇದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here