ಕಲಬುರಗಿ: ಸಂಗೀತದಿಂದ ಆಧ್ಯಾತ್ಮಕ ಶಾಂತ, ನೆಮ್ಮದಿ ಸಿಗುತ್ತದೆ ಮತ್ತು ಆಧ್ಯಾತ್ಮಿ ಬಲ ಸಮೃದ್ಧಿಗೊಳ್ಳುತ್ತದೆ ಎಂದು ಸಿದ್ರಾಮಪ್ಪ ಹೊದಲುರ ನುಡಿದರು.
ಅವರು ನಗರದ ಶಹಾಬಜಾರ ಅಕ್ಕಮಹಾದೇವಿ ದೇವಸ್ಥಾನ ಪ್ರಾಂಗಣದಲ್ಲಿ ಅಯೋಜಿಸಿದ ಡಾ. ಪಂಡಿತ ಪುಟ್ಟರಾಜ ಸಂಸ್ಕøತಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಚನ ಸಂಗೀತೋತ್ಸವ ಸಂಸ್ಕøತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಸಂಗೀತದಿಂದ ನಮ್ಮ ಸಂಸ್ಕ್ರತಿ ಗಟ್ಟಿಗೊಳ್ಳುತ್ತ ಸಂಗೀತಕ್ಕೆ ಹಿಂದಿನಕಾಲದಲ್ಲಿ ರಾಜಶ್ರೇಯವಿತ್ತು. ಇಂದು ಸಂಘ, ಸಂಸ್ಥೆಗಳು, ಮಠ ಮಾನ್ಯರು ಸಂಗೀತಕ್ಕೆ ಪ್ರತ್ರಾಹ ಕೊಡಬೇಕೆಂದು ನುಡಿದುರ. ಚನ್ನಮಲ್ಲಯ್ಯ ಹಿರೇಮಠ ಸಂಗೀತೋತ್ಸವ ಉದ್ಘಾಟಿಸಿದರು.
ಸಿದ್ರಾಮಪ್ಪ ಆಲಗೂಡಕರ್, ವಿರೇಶ ಬದ್ದೋಲಿ, ವಿಶ್ವನಾಥ ತಡಕಲ್, ಬಸವರಾಜ, ರಾಜಶೇಖರ ಜಕ್ಕಾ, ಆಶೀನಾಥ ಗೊಳೇದ, ರೇವಣಸಿದ್ದಯ್ಯ ಮಠಪತಿ, ಹಣಮಂತರಾವ ಕೊರಳ್ಳಿ ಇದ್ದರು. ಕು. ಗಂಗಾಂಬಿಕ ವೀರಯ್ಯ ಮಠಪತಿ,, ವೀರಯ್ಯಸ್ವಾಮಿ ಮಾಡ್ಯಾಳ. ಬಸವರಾಜ ಆಳಂದ ಶರಣಪ್ಪ ಕಟ್ಟಿಮನಿ, ಹಣಮಂತ ಸಂಕ್ಲೂರ, ಜಗನ್ನಾಥ ಚೆಂಗಟಿ ಇವರಿಗಂದ ದಾಸರವಾಣಿ, ಜನಪದಗೀತೆ, ವಚನಗಾಯನ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷರಾದ ರಾಚಯ್ಯಸ್ವಾಮಿ ರಟಕಲ್ ಸರ್ವರನ್ನು ಸ್ವಾಗತಿಸಿದರು.