ಜಾಲಿ ಗಿಡಗಳನ್ನು ತೆರವುಗೊಳಿಸಿದ ಬಿಜೆಪಿ ಮುಖಂಡನ ಕಾರ್ಯಕ್ಕೆ ಮೆಚ್ಚುಗೆ

0
81

ಶಹಾಬಾದ: ತಾಲೂಕಿನ ಭಂಕೂರದಿಂದ ಮುತ್ತಗಾ ಗ್ರಾಮದವರೆಗಿನ ರಸ್ತೆ ಎರಡು ಬದಿಯಲ್ಲಿ ಸಿಕ್ಕಾಪಟ್ಟೆ ಮುಳ್ಳಿನ ಜಾಲಿ ಗಿಡಗಳು ಬೆಳೆದು ವಾಹನ ಸವಾರರಿಗೆ ಹಾಗೂ ವಾಹನ ಚಾಲಕರಿಗೆ ತೊಂಬಾ ತೊಂದರೆಯಾಗುತ್ತಿರುವುದನ್ನು ಕಂಡು ಜಾಲಿ ಗಿಡಗಳನ್ನು ತೆರವುಗೊಳಿಸಲು ಮುಂದಾದ ಮುತ್ತಗಾ ಗ್ರಾಮದ ಬಿಜೆಪಿ ಮುಖಂಡ ಕೆಂಚಪ್ಪ ಪೂಜಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

¨ಭಂಕೂರ ಗ್ರಾಮದಿಂದ ಮುತ್ತಗಾ ಗ್ರಾಮ ಸುಮಾರು ನಾಲ್ಕು ಕಿಮೀ ದೂರದಲ್ಲಿದೆ. ಮುತ್ತಗಾ ಗ್ರಾಮದಿಂದ ಐವತ್ತಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಭಂಕೂರ ಗ್ರಾಮದ ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ.ಆದರೆ ರಸ್ತೆಯ ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾಲಿಗಿಡಗಳು ಬೆಳೆದಿರುವುದರಿಂದ ಟಂಟಂ ವಾಹನಗಳು ಬಾರದೇ ಇರುವುದು.ಅಲ್ಲದೇ ಬಸ್ ಚಾಲಕರು ಜಾಲಿ ಗಿಡಗಳು ತಾಕುತ್ತಿರುವುದರಿಂದ ಬರಲು ಹಿಂದೇಟು ಹಾಕುವಂತಾಗಿತ್ತು.ಇದರಿಂದ ಶಾಲಾ ಮಕ್ಕಳಿಗೆ ವಾಹನಗಳಿಲ್ಲದೇ ತೊಂದರೆಯಾಗುತ್ತಿತ್ತು.

Contact Your\'s Advertisement; 9902492681

ಸಂಜೆಯಾಗುತ್ತಲೇ ಯಾರು ಈ ಕಡೆ ಹೋಗದ ಪರಿಸ್ಥಿತಿ ಉಂಟಾಗಿತ್ತು.ಭಯದ ವಾತಾವರಣ ನಿರ್ಮಾಣವಾದ ಕಾರಣ ಗ್ರಾಮದ ಜನರು ಹಾಗೂ ಶಾಲಾಮಕ್ಕಳು ಮುತ್ತಗಾ ಗ್ರಾಮಕ್ಕೆ ಹತ್ತಿರ ರಸ್ತೆಯ ಎರಡು ಬದಿಯಲ್ಲಿ ತೆರವುಗೊಳಿಸಲು ಗ್ರಾಪಂ ಸದಸ್ಯೆಯಾದ ಲಕ್ಷ್ಮಿ ಕೆಂಚಪ್ಪ ಪೂಜಾರಿ ಅವರ ಪತಿ ಕೆಂಚಪ್ಪ ಪೂಜಾರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕೆಂಚಪ್ಪನವರು ಜೆಸಿಬಿ ಮೂಲಕ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಇದರಿಂದ ಮುತ್ತಗಾ ಗ್ರಾಮದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಪ್ರಮಾಣದಲ್ಲಿ ರಸ್ತೆಯ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದು ವಾಹನ ಸವಾರರಿಗೆ ಏನು ಕಾಣದಂತಾಗಿತ್ತು.ಇಲ್ಲಿಂದ ಹೋಗುವವರಿಗೆ ಮುಳ್ಳು ತಾಕುತ್ತಿತ್ತು.ಮೈಮೇಲೆ ಗಾಯಗಳಾಗುತ್ತಿದ್ದವು.ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿತ್ತು.ಮಕ್ಕಳು ಮುಳ್ಳಿನ ಗಿಡ ತೆರವುಗೊಳಿಸುವಂತೆ ಮನವಿ ಮಾಡಿದ್ದರಿಂದ ಈ ಕಾರ್ಯ ಕೈಗೊಂಡಿದ್ದೆನೆ.ಇದಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಅವರ ಸಹಕಾರವು ನೀಡಿದ್ದಾರೆ- ಕೆಂಚಪ್ಪ ಪೂಜಾರಿ ಬಿಜೆಪಿ ಮುಖಂಡ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here