ರಾಣಿ ಚೆನ್ನಮ್ಮರ ನಡೆ-ನುಡಿ ಜೀವನದಲ್ಲಿ ಅಳವಡಿಸಿಕೊಳ್ಳಿ

0
77

ಚಿಂಚೋಳಿ: ಬ್ರೀಟಿಷರ ವಿರುದ್ದ ಹೋರಾಟ ಮಾಡಿದ ಕಿತ್ತೂರ ರಾಣಿ ಚೆನ್ನಮ್ಮರ ನಡೆ ಬಾಳ ಗಟ್ಟಿತನವಾದದ್ದು ಅಂತವರ ನಡೆ-ನುಡಿ ಆಚಾರ ವಿಚಾರ ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದಾಗ ಮಾತ್ರ ಮಾಹತ್ಮರ ವೀರ ಮಾತೆಯರು ಕಂಡ ಕನಸು ನನಸಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಿ.ಆರ್.ಪಿ ಮೀನಾಕ್ಷಿ ಮದುಗಿರಿ ಹೇಳಿದರು.

ಅವರು ಇಲ್ಲಿನ ತಹಸೀಲ್ ಕಚೆರಿಯಲ್ಲಿ ಹಮ್ಮಿಕೊಂಡ ಕಿತ್ತೂರ ರಾಣಿ ಚೆನ್ನಮ್ಮರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರ ಅಂತರಾಳದಲ್ಲಿ ಅಂತ ಶಕ್ತಿ ಇರುತ್ತದೆ ಅದನ್ನು ಬಳಕೆ ಮಾಡಿಕೊಂಡು ಸಮಾಜಿಕ ಪರಿವರ್ತನೆಯಲ್ಲಿ ಹೆಜ್ಜೆ ಹಾಕಿದಾಗ ಮಾತ್ರ ಸಮಾಜದಲ್ಲಿ ವಿಚಾರಗಳು ಯಾವಾಗಲು ಜೀವಂತವಾಗಿರುತ್ತವೆ ಎಂದು ಸುದಿರ್ಗವಾಗಿ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ತಹಸಿಲ್ದಾರರಾದ ಅಂಜುಮ್ ತಬಸ್ಸುಮ ವಹಿಸಿ ಮಾತನಾಡಿದರು.

ವೆಂಕಟೇಶ ದುಗ್ಗನ ನಿರೂಪಿಸಿದರು. ಹೋರಾಟಗಾರ ಮಾರುತಿ ಗಂಜಗಿರಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ದನ್ನಿ ಅಂಗನವಾಡಿ, ಮೇಲ್ವಿಚಾರಕಿ ಮಿನಾಕ್ಷಿ ಸರೋಜಾ, ಸಂಗಯ್ಯಾ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here