ಖಾಸಗಿ ಅಂಗಡಿಗಳಿಗೂ ಕನ್ನಡ ನಾಮಫಲಕ ಕಡ್ಡಾಯಕ್ಕೆ ಜಯ ಕರ್ನಾಟಕ ಸಂಘಟನೆ ಆಗ್ರಹ

0
50

ಮಳವಳ್ಳಿ,(ಮಂಡ್ಯ): ಪುರಸಭೆ ವ್ಯಾಪ್ತಿಯಲ್ಲಿರುವ ಉದ್ದಿಮೆ ಅಂಗಡಿ ಮುಂಗಟ್ಟುಗಳು ಆಂಗ್ಲಬಾಷೆಯಲ್ಲಿರುವ ಅಥವಾ ಅನ್ಯಬಾಷೆಯಲ್ಲಿರುವ ನಾಮಫಲಕಗಳನ್ನು ಕೂಡಲೆ ತೆರೆವುಗೊಳಿಸಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ತಾಕಿತು ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರಮೇಶ್ ಕೆ.ಟಿ.ಆರ್  ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ಅಂಗಡಿಗಳು ಉದ್ದಿಮೆಗಳು, ಕಛೇರಿಗಳ ನಾಮ ಫಲಕಗಳು, ಇಂಗ್ಲೀಷ್‌ ಮಯವಾಗಿದ್ದು. ಉದ್ದಿಮೆದಾರರು ಕನ್ನಡದ ಬರಹಕ್ಕೆ ಹೆಚ್ಚಿಗೆ ಆದ್ಯತೆಯನ್ನು ಕೊಟ್ಟಿರುವುದಿಲ್ಲ. ಎಂದು ಆರೋಪಿಸಿ, ಸರ್ವೊಚ್ಚನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಶೇಕಡ 70% ಆದ್ಯತೆಯನ್ನು ಕೊಡಬೇಕಾಗಿದ್ದು,  ಆದರೆ ಈ ನಿಯಮ ತಾಲ್ಲೂಕಿನಲ್ಲಿ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ತಾಲ್ಲೂಕು ವ್ಯಾಪ್ತಿಯಲ್ಲಿರುವ ಉದ್ದಿಮೆ ಅಂಗಡಿ ಮುಂಗಟ್ಟುಗಳು ಆಂಗ್ಲಬಾಷೆಯಲ್ಲಿರುವ ಅಥವಾ ಅನ್ಯಬಾಷೆಯಲ್ಲಿರುವ ನಾಮಫಲಕ ಕೂಡಲೆ ತೆರೆವುಗೊಳಿಸಿ, ಕನ್ನಡದಲ್ಲಿ ನಾಮಫಲಕ  ಅಳವಡಿಸಕೊಳಲು ತಾಕಿತು ಮಾಡಬೇಕೆಂದು ಒತ್ತಾಯಿಸಿ,  ಮುಂದೆ ಉದ್ದಿಮೆಗಳಿಗೆ ಪರವಾನಗಿ ಕೊಡುವ ಮುನ್ನವೇ ಅಥವಾ ಪರವಾನಗಿಯ ಷರತ್ತುಗಳಲ್ಲಿ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ಕೊಡಬೇಕೆಂದು ನಮೂದಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಕಾರ್ಯಧ್ಯಕ್ಷ ಜಿತೇಂದ್ರ ಕುಮಾರ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಯ್ಯ, ಉಪಾಧ್ಯಕ್ಷ ಎಚ್.ಇ ಚಂದ್ರಶೇಖರ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here