ನಾಳೆ ಕುರುಬ ಸಾಂಸ್ಕೃತಿಕ ದರ್ಶನ: 13 ಗ್ರಂಥಗಳ ಅನಾವರಣ | ಗೊಂಡ ಸಂಸ್ಕೃತಿ ಪುಸ್ತಕಗಳ ಬಿಡುಗಡೆ

0
17

ಬೀದರ: ಕುರುಬ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ಬೀದರ ಜಿಲ್ಲಾ ಗೊಂಡ(ಕುರುಬ) ಅಭಿಮಾನಿಗಳ ಬಳಗ ಬೀದರ ಸಂಯುಕ್ತಾಶ್ರಯದಲ್ಲಿ ಕುರುಬ ಸಾಂಸ್ಕೃತಿಕ ದರ್ಶನ: ೧೩ ಗ್ರಂಥಗಳ ಅನಾವರಣ ಹಾಗೂ ಗೊಂಡ ಸಂಸ್ಕೃತಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಅ. ೩೦ ರಂದು ನಾಳೆ ೧೧ ಗಂಟೆಗೆ ಪೂಜ್ಯ ಚನ್ನಬಸವ ರಂಗ ಮಂದಿರ ಬೀದರನಲ್ಲಿ ಜರುಗಲಿದೆ.

ಸಮುದಾಯದ ಸಂಸ್ಕೃತಿಕ, ಧಾರ್ಮಿಕ, ಸಾಹಿತ್ಯೀಕ, ಆಧುನಿಕ ಹೀಗೆ ಹತ್ತು ಹಲವು ಮಾಹಿಯನ್ನೊಳಗೊಂಡ ಹತ್ತು ಸಂಪುಟಗಳ ಒಟ್ಟು ೧೩ ಗ್ರಂಥಗಳ ಜೊತೆಗೆ ಗೊಂಡ ಸಂಸ್ಕೃತಿ ಪುಸ್ತಕಗಳು ಅನಾವರಣಗೊಳಿಸುವ ಜೊತೆಗೆ ಬೀದರ ಜಿಲ್ಲೆಯ ಜನತೆಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಳಾದ ರಘುನಾಥ ಮಲ್ಕಾಪೂರೆ, ಸಂಸ್ಕೃತಿ ಚಿಂತಕರು ಹಾಗೂ ಮಾಜಿ ಮಂತ್ರಿಗಳಾದ ಎಚ್.ಎಂ.ರೇವಣ್ಣ, ಹೆಸರಾಂತ ವಿದ್ವಾಂಸರಾದ ಚನ್ನಪ್ಪ ಕಟ್ಟಿ, ಹಿರಿಯ ಸಾಹಿತಿ ಬಿದರಿ ಚಂದ್ರಕಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ಕುರುಬ ಸಂಸ್ಕೃತಿ ದರ್ಶನ ಯೋಜನಾ ನಿರ್ದೇಶಕ ಕಾ.ತ.ಚಿಕ್ಕಣ್ಣ, ಸಾಹಿತಿ ಎಂ.ಜಿ.ಗಂಗನಪಳ್ಳಿ, ಡಾ.ಸುನೀತಾ ಕೂಡ್ಲಿಕರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಸಂಜೀವಕುಮಾರ ಅತಿವಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಸಮಾಜದ ಬಗ್ಗೆ ಕಾಳಜಿಯುಳ್ಳವರು ಹಾಗೂ ಸಾಹಿತ್ಯಾಸಕ್ತರು ತಮ್ಮ ಕುಟುಂಬದ ಸದಸ್ಯರು ಹಾಗೂ ಗೆಳೆಯರೊಂದಿಗೆ ಕಾರ್ಯಕ್ರಮಕ್ಕೆ ಸರಿಯಾದ ಸಮಯ ಬೆಳಗ್ಗೆ 10 ಗಂಟೆಗೆ ರಂಗಮಂದಿರಕ್ಕೆ ಬಂದು ಐತಿಹಾಸಿಕ ಸಮಾರಂಭದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಭ್ರಮದ ರಸದೌತಣ ಸವಿಯಬೇಕೆಂದು ಕೋರಿದ್ದಾರೆ.

ಸಾಹಿತಿಗಳು, ಸಾಹಿತ್ಯಾಸ್ಕರು ಸಮಾಜದ ಹಿರಿಯರು ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅಕ್ಷರ ಸಂಸ್ಕೃತಿ ಬೆಳೆಸುವ ಉಳಿಸುವ ಕಾರ್ಯಕ್ರಮಕ್ಕೆ ಕೈ ಜೋಡಿಸಿ, ಹತ್ತು ಸಂಪುಟಗಳ ೧೩ ಗ್ರಂಥಗಳ ಒಟ್ಟು ಬೆಲೆ 4640 ಆಗಿದ್ದು, ಪುಸ್ತಕ ಅನಾವರಣದ ಸಂದರ್ಭದಲ್ಲಿ ದರ 3500₹ ಆಗಿರುತ್ತದೆ. ಪುಸ್ತಕ ಖರೀದಿಸುವ ಆಸಕ್ತರು ಕಾರ್ಯಕ್ರಮದ ಸಂಯೋಜಕರಾದ ಡಾ. ಸಂಜೀವಕುಮಾರ ಅತಿವಾಳೆ ಅವರ ಮೊ. ನಂ. +91 99860 33356 ಸಂಪರ್ಕಿಸಲು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here