ನವೆಂಬರ್ 1ಕ್ಕೆ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ

0
19

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅಸಹಕಾರ ಮತ್ತು 371 ಜೆ ಕಲಂ ಸಮರ್ಪಕ ಜಾರಿಗೆ ನೀರ್ಲಕ್ಷ ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನವೆಂಬರ 1 ರಂದು ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲಾಗುವುದೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷರಾದ ಎಂಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಲು ಸರಕಾರ ಬದ್ಧವಾಗಿದ್ದರೆ ಕೂಡಲೇ ಕಲಬುರಗಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದು ಘೋಷಿಣೆ ಮಾಡಬೇಕು. ಕೆಲಸಕ್ಕಾಗಿ ಕರ್ನಾಟಕದ ರಾಜಧಾನಿ ಬೆಂಗಳೂರುಗೆ ಹೋಗಿ ಬರುವುದು ದುಬಾರಿ ಜೊತೆಗೆ ಸಮಯವು ಖರ್ಚಾಗುತ್ತಿದ್ದು, ಕಲಬುರಗಿಯನ್ನು ಉಪ ರಾಜಧಾನಿ ಘೋಷಣೆಯಿಂದ ಜನರಿಗೆ ಅನುಕೂಲವಾಗುತ್ತದೆ ಎಂದರು.

Contact Your\'s Advertisement; 9902492681

೩೭೧ (ಜೆ) ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಅಭಿವೃದ್ಧಿ ಕೋಶ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇನ್ನೂ ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ರೈಲ್ವೆ ಡಿವಿಷನ್, ಏಮ್ಸ್, ಟೆಕ್ಸ್ ಟೈಲ್ಸ್ ಪಾರ್ಕ್, ಆಹಾರ ಪ್ರಯೋಗಾಲಯ ಹಾಗೂ ಇಂಧನ ಪ್ರಾದೇಶಿಕ ಕಚೇರಿ ಹೋಗಿವೆ. ಇದೀಗ ದಶಕಗಳ ಕಾಲ ಇತಿಹಾಸ ಹೊಂದಿರುವ ದೂರದರ್ಶನ ಕೇಂದ್ರವನ್ನೂ ಕೂಡ ಕಲಬುರಗಿಯಿಂದ ಕಿತ್ತುಕೊಳ್ಳಲಾಗುತ್ತಿದೆ. ಬಹುದಿನಗಳ ಹಿಂದೆಯೇ ಘೋಷಣೆಯಾದ ಥೀಮ್ ಪಾರ್ಕ್ ಕಾಮಗಾರಿ “ಡ್ರೀಮ್ ಪಾರ್ಕ್ ” ಆಗಿ ಉಳಿದಿದೆ. ಕೆರೆ ಅಭಿವೃದ್ಧಿ, ಸೌಂದರ್ಯಕರಣ ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ವಿಮಾನ ನಿಲ್ದಾಣ, ಕೇಂದ್ರೀಯ ವಿಶ್ವವಿದ್ಯಾಲಯ, ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಹೊಂದಿದೆ. ಆದ್ದರಿಂದ ಕಲಬುರಗಿ ಜಿಲ್ಲೆ ರಾಜ್ಯದ ಉಪರಾಜಧಾನಿ ಒಂದು ತಿಂಗಳೋಳಗಾಗಿ ಘೋಸಿಸಿ ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಎಂದು ನವೆಂಬರ 1 ಕಂದು ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೇಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ನಡೆಸಲಾಗುವುದೆಂದು ನರಿಬೋಳ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆಯಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ, ಡಾ.ರಾಜಶೇಖರ ಬಂಡೆ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here