ನಟ ಚೇತನ್, ಡಾಲಿ ಧನಂಜಯ ವಿರುದ್ಧ ವ್ಯವಸ್ಥಿತ ಪಿತೂರಿ

0
24

ಬುದ್ಧ, ಬಸವ ಅಂಬೇಡ್ಕರ್ ಹಾಗೂ ಕುವೆಂಪು ಅವರ ಅನುಯಾಯಿಯಾಗಿರುವ ಚೇತನ್ ಹಾಗೂ ಧನಂಜಯ ಅವರಿಗೆ ಈ ಹಿಂದೂತ್ವವಾದಿಗಳು ವಿನಾಕಾರಣ ಕಾಟ ಕೊಡುತ್ತಿದ್ದಾರೆ. ಹಾಗೆ ನೋಡಿದರೆ ವೈದಿಕತೆಯ ವಿರುದ್ಧ ಮೊದಲು ಸಮರ ಸಾರಿದವರು ನೆಲಮೂಲದ ವೀರಭದ್ರ! ಪ್ರತಿಭಾನ್ವಿತ ನಟರಾದ ಚೇತನ್ ಹಾಗೂ ಧನಂಜಯ ಅವರನ್ನು ಮೂದಲಿಸುವುದು, ಅವರ ವಿರುದ್ಧ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. -ಅರ್ಜುನ ಭದ್ರೆ, ದಸಂಸ, ರಾಜ್ಯ ಸಂಘಟನಾ ಸಂಚಾಲಕ.

ಕಲಬುರಗಿ: ರಾಜ್ಯದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಕಾಂತಾರ ಮತ್ತು ಹೆಡ್ ಬುಷ್ ಸಿನಿಮಾಗಳು ಹಾಗೂ ನಾಯಕ ನಟರಾದ ರಿಷÀಬ್‍ಶೆಟ್ಟಿ ಮತ್ತು ಡಾಲಿ ಧಜನಂಜಯ ಅವರ ಕುರಿತಾಗಿ ಸಾಕಷ್ಟು ವಿವಾದ, ಚರ್ಚೆ ಶುರುವಾಗಿವೆ. ಈ ವಿವಾದಗಳಿಗೆ ಹಿಂದುತ್ವದ ಅಜೆಂಡಾ ಮುಖ್ಯ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಆಪಾದಿಸಿದರು.

Contact Your\'s Advertisement; 9902492681

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾ ಈ ನೆಲದ ಮೂಲನಿವಾಸಿಗಳ ಸಂಸ್ಕøತಿಯ ಪ್ರತೀಕವಾಗಿದೆ. ವಾಸ್ತವದಲ್ಲಿ ರಿಷÀಬ್‍ಶೆಟ್ಟಿ ತಮ್ಮ ಚಿತ್ರದಲ್ಲಿ ದೈವ (ಭೂತಾರಾಧಾನೆ) ಅವಮಾನ ಮಾಡಿಲ್ಲ. ಸಿನಿಮಾದಲ್ಲಿ ಪಾತ್ರಗಳು ಮಾತನಾಡಿವೆ ಅಷ್ಟೇ! ಆದರೆ ಹಿಂದೂತ್ವವಾದಿಗಳು ಹಾಗೂ ಸಂಘ ಪರಿವಾರದ ಜನ ಇದನ್ನು ರಾಜಕೀಯವಗಿ ಮತ್ತು ಸೈದ್ಧಾಂತಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ವಿಷಯದಲ್ಲಿ ನಟ ಚೇತನ್ ಹೇಳಿದ್ದು, ಸರಿಯಾಗಿದೆ ಮತ್ತು ವಾಸ್ತವವಾಗಿದೆ. ನಟ ರಿಷÀಬ್ ಶೆಟ್ಟಿಯವರು ಹೇಳುವಂತೆ ಭೂತಾರಾಧಾನೆ ಹಿಂದೂ ಸಂಸ್ಕøತಿಯ ಬಾಗವಾಗಿದ್ದರೆ ದಲಿತರು, ಬುಡಕಟ್ಟು, ಆದಿವಾಸಿಗಳು ಧರ್ಮಸ್ಥಳ, ಸುಬ್ರಮಣ್ಯ ದೇವಾಲಯಗಳ ಅರ್ಚಕರು ಈವರೆಗೆ ಯಾಕೆ ಆಗಿಲ್ಲ? ಈ ನೆಲದ ಮೂಲ ನಿವಾಸಿಗಳ ಸಂಸ್ಕøತಿ, ಪರಂಪರೆಯನ್ನು ತಮ್ಮದೆಂದು ಸಂಘ ಪರಿವಾರದವರು ಸುಳ್ಳು ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಅದೇರೀತಿ ಡಾಲಿ ಧನಂಜಯ ಅಭಿನಯಿಸಿದ ಹೆಡ್ ಬುಷ್ ಸಿನಿಮಾದಲ್ಲಿ ಜಾನಪದ ಮೂಲಿಗರ ವೀರಗಾಸೆ ಕೂಡ ಶೈವ ಧರ್ಮದ ಒಂದು ಆಚರಣೆಯಗಿದೆ. ಕಾಂತರ ಸಿನಿಮಾದಲ್ಲಿ ದೈವದ ಮೇಲೆ ಗುಂಡಾಗಳು ದಾಳಿ ಮಾಡಿ ಚನ್ನಾಗಿ ಒದೆಯುತ್ತಾರೆ. ಇದು ಮಾತ್ರ ಅವಮಾನ ಅಗುವುದಿಲ್ಲ. ಆದರೆ ಹೆಡ್ ಬುಷ್ ಚಿತ್ರದಲ್ಲಿ ಪುರವಂತರ ವೇಷ ಹಾಕಿದ ಪಾತ್ರಧಾರಿಗಳಿಗೆ ಒದೆಯುವುದು ಮಾತ್ರ ಯಾಕೆ ಅವಮಾನವೆಂದು ಬೊಬ್ಬೆ ಹೊಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಇಲ್ಲಿಯೂ ಪಾತ್ರಗಳು ಮಾತನಾಡಿವೆ ಅಷ್ಟೇ! ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here