ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ

0
12

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಕಲೆ ಸಾಹಿತ್ಯ ಸಂಗೀತ ನಿರಂತರ ನಡೆಯಲಿ ಪಾಳಾ ಶ್ರೀಗಳು ಇತ್ತೀಚೆಗೆ ಮತ್ತಿಮಡು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಲಲಿತ ಕಲಾ ಸೇವಾ ಸಂಸ್ಥೆ ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲ್ಬುರ್ಗಿ ಅವರ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಿತು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಷ.ಬ್ರ ಡಾ. ಗುರುಮೂರ್ತಿ ಶಿವಾಚಾರ್ಯರು ಕಟ್ಟಿಮನಿ ಸಂಸ್ಥಾನ ಹಿರೇಮಠ ಪಾಳಾ ಅವರು ಮಾತನಾಡಿ ಸಂಗೀತ ಕಲೆ ಇದು ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ ಈ ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಸಂಗೀತದಿಂದ ಅನೇಕ ರೋಗಗಳು ಕೂಡ ನಿವಾರಣೆಯಾಗುತ್ತವೆ ನಿರಂತರ ಕಾರ್ಯಕ್ರಮ ಹಾಗೂ ಕಾರ್ಯ ಚಟುವಟಿಕೆಗಳು ಸಂಘ ಸಂಸ್ಥೆಗಳ ಮೂಲಕ ನಡೆಯಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಈ ಕಾರ್ಯಕ್ರಮವನ್ನು ಗುಂಡುಗುರ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷ ವೇದಮೂರ್ತಿ ಜಗನ್ನಾಥ್ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೇತೃತ್ವವನ್ನು ಶ್ರೀ ವೇದಮೂರ್ತಿ ದೇವೇಂದ್ರಯ್ಯ ಸ್ವಾಮಿಗಳು ವಹಿಸಿದ್ದರು. ಲಲಿತ ಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ್ ಶಳ್ಳಗಿ ಮತ್ತಿಮಡು, ಮುಖ್ಯ ಅತಿಥಿಗಳಾಗಿ ಶಿವಲಿಂಗಪ್ಪ ಸಾಹು ಮುದಗೊಂಡ, ಮಲ್ಲಿಕಾರ್ಜುನ್ ಬಿರಾದರ್, ಸತೀಶ್ ಹರಸೂರ್, ರಾಜಕುಮಾರ ಬಿಚ್ಚಾ, ಶಿವಕುಮಾರ್ ಬಿರಂಜಿ, ನೀಲಕಂಠ ಬಿರಾದರ್, ಶಿವಪ್ಪಗೌಡ ಬಿರಾದರ್,ಸಂತೋಷ್ ಕಟ್ಟಿಮನಿ, ಸುನಿಲ್ ಕಾಲಬಾ, ಕಲ್ಯಾಣಿ ಹಡಪದ್, ಗುಂಡುಗುರ್ತಿ, ಬಸವರಾಜ್ ರಾಜಪುರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲ್ಲಿನಾಥ ಹಿರೇಮಠ ಹಿತ್ತಲಶಿರೂರ ಅವರ ಸುಗಮ ಸಂಗೀತ, ಮಹೇಶ್ ನಾಗಣ್ಣ ತುಪ್ಪದ್ ಜಾನಪದ ಗೀತೆ, ಶಿವಕುಮಾರ್ ವೀರಯ್ಯಸ್ವಾಮಿ ಜಾನಪದ ಗೀತೆ, ನಿಜಲಿಂಗ ನಾಗಪ್ಪ ಕುಂಬಾರ್ ವಚನ ಗಾಯನ, ಸುರೇಶ್ ನಿಡಗುಂದ ದಾಸವಾಣಿ, ಬಸವರಾಜ್, ದೇವೇಂದ್ರ ಇವರು ತತ್ವಪದ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು.

ವಾದ್ಯ ಸಹಕಾರವನ್ನು ಸೈದಪ್ಪ ಚೌಡಾಪುರ್,ಶಿವಶರಣಯ್ಯ ಸ್ವಾಮಿ ಲಿಂಗದಳ್ಳಿ,ಚೇತನ್ ಬೀದಿಮನಿ, ರವಿ ಸ್ವಾಮಿ ಗೋಟೂರ, ಮೌನೇಶ್ ಪಂಚಾಳ್,ಅಭಿಲಾಶ್ ಮಠಪತಿ ಅವರು ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು.ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ಮುದಗೊಂಡ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here