ಕಲಬುರಗಿ: ನಗರದ ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ದಾರಾ ಎ ಅರ್ಕಾಮ್ ಶಾಲಾ ಮಕ್ಕಳಿಂದ ಪ್ಲಾಸ್ಟಿಕ್ ಬ್ಯಾನ್ ಕುರಿತು ಜಾಗೃತಿ , ಜಾಥಾ ನಡೆಸಿ ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಪರಿಸರ ಅಭಿಯಂತಕ ಅಧಿಕಾರಿ ಮುನಾಫ್ ಪಟೇಲ, ಆರೋಗ್ಯ ಕಲ್ಯಾಣ ಅಧಿಕಾರಿ ರಾಜು ಕಟ್ಟಿಮನಿ, ಕಲ್ಯಾಣ ಸ್ವಾಮಿ, ದೀಪಕ್ ಚೌವ್ಹಾಣ, ಅಬ್ದುಲ್ ಗನಿ, ಮಲ್ಲಿಕಾರ್ಜುನ್ ಸೇರಿದಂತೆ ಮುಂತಾದವರು ಇದ್ದರು.
ಜಾಗೃತಿ ಜಾಥಾ ನಗರದ ಕೆಬಿಎನ್ ದರ್ಗಾದ ತರಕಾರಿ ಮಾರುಕಟೆ ಮಾರ್ಗಾದಿಂದ ಮುಸ್ಲಿಂ ಚೌಕ್ ಮಾರ್ಗವಾಗಿ ಸೂಪರ್ ಮಾರ್ಕೆಟ್ ಪ್ರದೇಶದ ವರೆಗೆ ಜಾಗೃತಿ ಅಭಿಯಾನ ಜರುಗಿತು.