ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಆಗತ್ಯ

0
29

ಶಹಾಬಾದ್: ಎ.ಐ.ಯು.ಟಿ.ಯು.ಸಿ ಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಶಹಾಬಾದಿನಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶ ಜರುಗಿತು.

ಈ ವೇಳೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಮಾತನಾಡಿ ಶಹಾಬಾದಿನಲ್ಲಿರುವ ಸಾವಿರಾರು ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಸರಕಾರದಿಂದ ತಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಕಾರ್ಮಿಕ ಇಲಾಖೆಯಿಂದ ಹಲವಾರು ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ನೈಜ ಕಾರ್ಮಿಕರು ದೂರ ಉಳಿಯುತ್ತಿದ್ದಾರೆ. ರಾಜ್ಯ ಸರಕಾರ ಕಟ್ಟಡ ಕಾರ್ಮಿಕರ ನಿಧಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದು ಕಷ್ಟ ಪಟ್ಟು ದುಡಿಯುವ ಕಟ್ಟಡ ಕಾರ್ಮಿಕರಿಗೆ ಅನುಕೂಲಕರವಾಗಬೇಕಾಗಿದೆ. ಇಂದು ನಾವು ನೋಡುತ್ತಿರುವ ಹಲವಾರು ಸಮಸ್ಯೆಗಳನ್ನು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ನುಡಿದರು.

Contact Your\'s Advertisement; 9902492681

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎ.ಐ.ಯು.ಟಿ.ಯು.ಸಿ ನ ಸ್ಥಳೀಯ ಸಂಚಾಲಕರಾದ ರಾಘವೇಂದ್ರ ಎಂ.ಜಿ. ರವರು ಮಾತನಾಡುತ್ತಾ, ಶಹಾಬಾದ ಹಾಗೂ ಸುತ್ತ ಹಳ್ಳಿಗಳಿಂದ ಸಾವಿರಾರು ಕಟ್ಟಡ ಕಾರ್ಮಿಕರು ದಿನಾಲೂ ಕಲಬುರಗಿಗೆ ಹೋಗಿ ದುಡಿದು ಬರುತ್ತಿದ್ದಾರೆ, ಅದರಲ್ಲಿ ಬಹುಸಂಖ್ಯಾತರು ಮಹಿಳೆಯರು ಕಷ್ಟ ಪಟ್ಟು ದುಡಿಯುತ್ತಿದ್ದಾರೆ. ಸರಕಾರದ ಸೌಲಭ್ಯಗಳು ಅವರಿಗೆ ಸಿಗುವಂತೆ ಸಂಘಟನೆಯು ಕಾರ್ಯ ರೂಪಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಕಟ್ಟಡ ಕಾರ್ಮಿಕ ಸಂಘದ ಸಂಚಾಲಕರಾದ ತಿಮ್ಮಯ್ಯ ಬಿ. ಮಾನೆ ರವರು ನಡೆಸಿಕೊಟ್ಟರು. ನಂತರ ಕಟ್ಟಡ ಕಾರ್ಮಿರ ಶಹಾಬಾದ ಸಮಿತಿಯನ್ನು  ರಚಿಸಲಾಯಿತು. ಸಂಚಾಲಕರಾಗಿ ತಿಮ್ಮಯ್ಯ ಬಿ. ಮಾನೆ, ಸದಸ್ಯರಾಗಿ, ಲಕ್ಷ್ಮಣ ದೇವಕರ, ಸುರೇಶ, ಹಣಮಂತ  ಡಿ., ನಾಗರಾಜ, ರಾಮು, ಲಕ್ಷ್ಮಣ ದೇವದುರ್ಗಕರ್, ಕಾಳಿಂಗ, ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here