ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಹೇಳಿಕೆಗೆ ಜಾಗ ಖಾಲಿ ಇಟ್ಟಿದ್ದೇವೆ:________________________________________________ ಕಲಬುರಗಿ ಜಿಲ್ಲಾಡಳಿತ ಮತ್ತು ಮಹಾನರ ಪಾಲಿಕೆಯ ಎಡ್ಡವಟ್ಟಿನಿಂದ ನಿವಾಸಿಗಳ ಹಕ್ಕುಗಳು ಅತಂತ್ರಕ್ಕೆ ಸಿಲುಕಿದ್ದು, ಈ ಕುರಿತು ಅಧಿಕಾರಿಗಳ ಅಭಿಪ್ರಾಯ ಕೇಳಿದರೆ ಒಬ್ಬರ ಮೇಲೆ ಒಬ್ಬರು ಹಾಕುವ ಮೂಲಕ ನುನುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರಿಂದ ಅವರ ಹೇಳಿಕೆಗಾಗಿ ಜಾಗಾ ಖಾಲಿಟ್ಟಿದ್ದೇವೆ.
- ಸಾಜಿದ್ ಅಲಿ
ಕಲಬುರಗಿ: ಜಿಲ್ಲಾಡಳಿತದ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಎಡವಟ್ಟಿನಿಂದ 20 ವರ್ಷಗಳಿಂದ ನಗರದ ಹಗರಗಾ ಪ್ರದೇಶದಲ್ಲಿರುವ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ 468 ಕುಟುಂಬದ ನಿವಾಸಿಗಳು ವಿವಿಧ ಮೂಲಭೂತ ಸೌಕರ್ಯ ಹಾಗೂ ದಾಖಲೆಗಳಿಂದ ವಂಚಿತಾರಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
2022ರಲ್ಲಿ ನಿರ್ಮಾಣವಾಗಿ ಮನೆ ಹಂಚಿಕೆಯಾಗಿರುವ ಸೋನಿಯಾ ಗಾಂಧಿ ಆಶ್ರಯ ಕಾಲೋನಿ ಸರಕಾರಿ ಜಮೀನು ಸರ್ವೆ ನಂಬರ್ 84/1 ಮತ್ತು 84/2 ಆಗಬೇಕಿತ್ತು. ಆದರೆ ಜಿಲ್ಲಾಡಳಿತ ಮತ್ತು ಕಲಬುರಗಿ ಪಾಲಿಕೆಯ ಎಡುವಟ್ಟಿನಿಂದಾಗಿ ಹಕ್ಕು ಪತ್ರದಲ್ಲಿ ಸರ್ವೆ ನಂಬರ್ 45/1 ಮತ್ತು 45/2 ನಮೋದಿಸಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.
ಈ ಆಸ್ತಿ ಮಲಗತ್ತಿ ನಿವಾಸಿಯಾಗಿರುವ ಮದಾರ ಪಟೇಲ ತಂದೆ ಸೈಯದ ಪಟೇಲ ಎಂಬುವರಿಗೆ ಸೇರಿದ ಖಾಸಗಿ ಆಸ್ತಿ ಆಗಿದೆ. ಹಕ್ಕು ಪತ್ರದಲ್ಲಿರುರವ ಸರ್ವೆ ನಂಬರ್ ತಾವರಗೇರಾ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿ ಮೂಲಭೂತ ಸೌಲಭ್ಯ ಕಲ್ಪಿಸುವ ಇಲಾಖೆ ಅಧಿಕಾರಿಗಳು ಸೌಕರ್ಯ ನೀಡಿದೇ ಮರಳುವಂತಹ ಘಟನೆಗಳು ಇಲ್ಲಿನ ನಿವಾಸಿಗಳ ಎದುರಿಸುತ್ತಿದ್ದಾರೆ. ಈ ಎಡುವಟ್ಟಿನಿಂದ ಕಳೆದ ಇಪ್ಪತು ವರ್ಷಗಳಿಂದ ಆಶ್ರಯ ಕಾಲೋನಿಗೆ ಮೂಲಭೂತ ಸೌರ್ಯಗಳಾದ ಚರಂಡಿ, ನೀರು, ರಸ್ತೆ, ಆಸ್ಪತ್ರೆ ಸೇರಿದಂತೆ ವಿವಿಧ ಸೌಲಭ್ಯ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿಗಳ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ಸರ್ವೆ ನಂ. ಬದಲವಾಣೆ ಬಗ್ಗೆ ನನ್ನಗೆ ಮಾಹಿತಿ ಇಲ್ಲ. ನಾನು ಅಧಿಕಾರಿಯೊಂದಿಗೆ ಮಾತನಾಡುತ್ತೇನೆ. -ಕನೀಜ್ ಫಾತೀಮಾ ಖಮರುಲ್ ಇಸ್ಲಾಂ. ಕಲಬುರಗಿ ಉತ್ತರ ಮತಕೇತ್ರದ ಶಾಸಕಿ.
ಸರ್ವೆ ನಂಬರ್ 84/1 ಮತ್ತು 84/2 ಕರ್ನಾಟಕ ಗೃಹ ಮಂಡಳಿ ಗುಲಬರ್ಗಾ ವ್ಯಾಪ್ತಿಯಲ್ಲಿ ಬರುತ್ತದೆ. ಅಧಿಕಾರಿಗಳ ಎಡುವಟ್ಟಿನಿಂದ ಸರ್ವೆ ನಂಬರ ಬದಲಾವಣೆ ಆಗಿ. ಇದೀಗ ಸಾವಿರಾರು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿ. ನಿವಾಸಿಗಳು ಅತಂತ್ರಕ್ಕೆ ಸಿಲುಕಿಸಿದ್ದಾರೆ.
ಪಾಲಿಕೆಯಿಂದ ನೋಟಿಸ್: ಕಲಬುರಗಿ ಮಹಾನಗರ ಪಾಲಿಕೆ ಸೋನಿಯಾ ಗಾಂಧಿ ನಿವಾಸಿಗಳಿಗೆ ಮತ್ತೊಮ್ಮೆ ಹಕ್ಕು ಪತ್ರ ಪಡೆಯಲು ನೋಟಿಸ್ ನೀಡಿದ್ದು, ನೋಟಿಸ್ ನಲ್ಲಿ ಪಾಲಿಕೆ 57 ಸಾವಿರ ಹಣದ ಡಿಡಿಯನ್ನು ಪಾವತಿಗೆ ಸೂಚಿಸಿದೆ. ಆದರೆ ನೋಟಿಸ್ ನಲ್ಲಿ ಮನೆಗಳ ಸಂಖ್ಯೆಯೊಂದಿಗೆ ಖಾಸಗಿ ಜಮೀನ್ ಸರ್ವೆ ನಂಬರ್ ಗೆ ನೋಟಿಸ್ ನೀಡಿರುವುದು ಎಡವಟ್ಟಿನ ಮೇಲೆ ಮತ್ತೊಮ್ಮೆ ಅದೇ ತಪ್ಪು ಮತ್ತೊಮ್ಮೆ ಮಾಡಲು ಮುಂದಾಗಿರುವುದು ಆತಂಕ ಸೃಷ್ಠಿಸಿದೆ.
ತಕ್ಷಣ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಎಚ್ಚೆತುಕೊಂಡು ಸರ್ವೆ ನಂಬರ 84/1 ಮತ್ತು 84/2 ಹೆಸರಲ್ಲಿ ಎಲ್ಲಾ 468 ಮನೆಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಸಬೇಕು. ಮೂಲಭೂತ ಸೌಕರ್ಯದ ಜೊತೆಗೆ ಚುನಾವಣಾ ಗುರುತಿನ ಚಿಟ್ಟಿ ಸೇರಿದಂತೆ ದಸ್ತಾವೇಜ್ ಬದಲಾವಣೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಆಶ್ರಯ ಕಾಲೋನಿ ಸರ್ವೆ ನಂಬರ್ ಬದಲಾಯಿಸಿ ಹಕ್ಕು ಪತ್ರ ನೀಡಿರುವುದು ಜನನ ಮತ್ತು ಮರಣ ಹಾಗೂ ಚುನಾವಣೆ ಗುರುತಿನ ಚೀಟಿ ಪಡೆಯಲು ಗ್ರಾಮ ಪಂಚಾಯಿತ್ ಮತ್ತು ಮಹಾನಗರ ಪಾಲಿಕೆ ಕೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ನಮ್ಮ ಕೆಲಸ ಮಾಡುತ್ತಿಲ್ಲ. ಸೋನಿಯಾ ಗಾಂಧಿ ಕಾಲೋನಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ. ನಗರ ವ್ಯಾಪ್ತಿಗೆ ಬರುವುದಿಲ್ಲ ಎಂದು 20 ವರ್ಷಗಳಿಂದ ಪಾಲಿಕೆ ಸೌಲಭ್ಯ ವಂಚಿತಾಗಿ ಉಳಿವಂತೆ ಮಾಡಿದೆ. ಅಧಿಕಾರಿಗಳ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ತಕ್ಷಣ ನಮ್ಮ ಸಮಸ್ಯೆಗೆ ಪರಿಹಾರಿಸಬೇಕು. -ಮೊಹಮ್ಮದ್ ರಫೀಕ್, ಸೋನಿಯಾ ಗಾಂಧಿ ಆಶ್ರಯ ಕಾಲೋನಿ ನಿವಾಸಿ.
ಸರ್ವೆ ನಂ. 84/1 ಮತ್ತು 84/2 ಹೆಸರಲ್ಲಿ ನೀಡಬೇಕಾದ ಹಕ್ಕು ಪತ್ರಗಳು ಇದೀಗ ಕಲಬುರಗಿ ಮಹಾನಗರ ಪಾಲಿಕೆ ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿ ನಿವಾಸಿಗಳಿಗೆ ಹಕ್ಕು ಪತ್ರವಾಗಿ ನೀಡಲು ಮುಂದಾಗಿದೆ, ಎಲ್ಲಾ ಮನೆಗೆ ನೋಟಿಸ್ ನೀಡಿ 57 ಸಾವಿರ ಹಣ ಪಾವತಿಗೆ ಸೂಚಿಸಿದ್ದಾರೆ. 20 ವರ್ಷದ ಹಿಂದಿನ ತಪ್ಪು ಮತ್ತೆ ಮರುಕಳಿಸುತ್ತಿದೆ. – ಮೊಹಮ್ಮದ್ ಶಬ್ಬೀರ್ ಅಹ್ಮದ್, ಸೋನಿಯಾ ಗಾಂಧಿ ಆಶ್ರಯ ಕಾಲೋನಿ ನಿವಾಸಿ.