ಇತಿಹಾಸದಲ್ಲಿ ವಲ್ಲಾಬಾಯಿ ಪಟೇಲ್ ಹೆಸರು ಅಜರಾಮರ

0
7

ಶಹಾಬಾದ: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸರ್ದಾರ ವಲ್ಲಾಬಾಯಿ ಪಟೇಲ್ ಹೆಸರು ಭಾರತದ ಇತಿಹಾಸದಲ್ಲಿ ಎಂದೆಂದೂ ಅಜರಾಮರ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಹೇಳಿದರು.

ಅವರು ಸೋಮವಾರ ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಪ್ರಕಾಶ ಅಂಬೇಡ್ಕರ್ ಪ್ರೌಢಶಾಲೆಯ ವತಿಯಿಂದ ಏಕತಾ ದಿನಾಚರಣೆಯ ನಿಮಿತ್ತÁಯೋಜಿಸಲಾದ ಶಾಲಾ ಮಕ್ಕಳಿಂದ ಏಕತಾ ಓಟದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ತಮ್ಮ ಜೀವನವನ್ನು ದೇಶಕ್ಕೆ ಸಮರ್ಪಿಸಿದ ಪಟೇಲರ್ ಕೊಡುಗೆಯನ್ನು ಎಂದಿಗೂ ಮರೆಯುವುದಿಲ್ಲ. ಹರಿದು ಹೋದ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಿಸುವಲ್ಲಿ ಪಟೇಲರ ಪಾತ್ರ ಹಿರಿದು ಎಂದು ಬಣ್ಣಿಸಿದರು.

ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಶಂಕರ ಜಾಧವ ಹಾಗೂಪ್ರಕಾಶ ಅಂಬೇಡ್ಕರ್ ಶಾಲೆಯ ಮುಖ್ಯಗುರು ಚಂದ್ರಶೇಖರ ಗಾರಂಪಳ್ಳಿ ಮಾತನಾಡಿ,ಬಲಿಷ್ಠ,ಸ್ವಾಭಿಮಾನಿ, ಸ್ವಾವಲಂಬಿ ಭಾರತವನ್ನು ಇಡೀ ವಿಶ್ವ ತಲೆ ಎತ್ತಿನೋಡುವಂತೆ ಕಟ್ಟಿದವರು ಪಟೇಲರು. ಅವರ ಬಡವರ ಬಗೆಗಿನ ಕಾಳಜಿ, ದೇಶಪ್ರೇಮ, ದಿಟ್ಟನಿರ್ಧಾರ ಕೈಗೊಳ್ಳುವ ಆತ್ಮಶಕ್ತಿ ಎಲ್ಲ ಕಾಲದ ರಾಜಕೀಯ ಕಟ್ಟಾಳುಗಳಿಗೆ ಮಾದರಿ ಎಂದರು.

ಶಿಕ್ಷಕರಾದ ಅನುದಾನಿತ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷ ಪ್ರವೀಣ ಹೇರೂರ,ಶಾಂತಮಲ್ಲ ಶಿವಭೋ, ದತ್ತಪ್ಪ ಕೋಟನೂರ್, ಎನ್.ಡಿ.ಜಕಾತೆ,ಅನೀಲಕುಮಾರ,ವಿಷ್ಣತೀರ್ಥ ಆಲೂರ, ಸೀತಮ್ಮ.ಎನ್,ಶಶಿಕಲಾ.ಕೆ, ಪಾಯಣಪ್ಪ ಜೈನ್, ಶರಣಮ್ಮ ಪುರಾಣಿಕ್,ಸುರೇಶ ಕಾಂಬಳೆ,ಗುರುಶಾಂತಪ್ಪ ನಾಟೇಕಾರ,ಸುನಂದಾ ಕುಮಸ್ತೆ, ಸತೀಶಕುಮಾರ ನವಲೆ, ಅರ್ಚನಾ ಸೇರಿದಂತೆ ಶಾಲಾಮಕ್ಕಳು ಏಕತಾ ಓಟದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here