ಸುರಪುರ:ಆರೋಗ್ಯ ಇಲಾಖೆ ಸಿಬ್ಬಂದಿಗಳ ಗೃಹ ನಿರ್ಮಾಣಕ್ಕೆ ಶ್ರೀರಾಮುಲು ಚಾಲನೆ

0
6

ಸುರಪುರ: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಿಬ್ಬಂದಿಗಳ ನೂತನ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಸಾರಿಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದರು.ಸೋಮವಾರ ನಗರಕ್ಕೆ ಭೇಟಿ ನೀಡಿದ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಗುದ್ದಲಿ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಆನೆ ಕಾಲು ರೋಗ ನಿರ್ಮೂಲನೆಯ ಅಂಗವಾಗಿ ನಡೆಯಲಿರುವ ಉಚಿತ ಮಾತ್ರೆ ನುಂಗಿಸುವ ಅಭಿಯಾನಕ್ಕೂ ಚಾಲನೆ ನೀಡಿ ಪೂಸ್ಟರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮುಲು ಅವರು,ಸರಕಾರ ಸರ್ವ ಜನರ ಅಭೀವೃಧ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತದೆ ಎಂದರು.ಅಲ್ಲದೆ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿನ ಎಸ್‍ಸಿ,ಎಸ್ಟಿ ಮೀಸಲು ಪ್ರಮಾಣ ಹೆಚ್ಚಳದ ಕುರಿತು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ,ರಾಜ್ಯದಲ್ಲಿನ ಎಸ್‍ಸಿ,ಎಸ್ಟಿ ಮೀಸಲು ಹೆಚ್ಚಳಕ್ಕೆ ಕಳೆದ 4 ದಶಕಗಳಿಂದ ಹೋರಾಟ ನಡೆಸಲಾಗಿತ್ತು,ಅಲ್ಲದೆ ಸಮುದಾಯಕ್ಕಾಗಿ ನಮ್ಮ ಸ್ವಾಮೀಜಿಯವರು, ನಾವು,ರಾಜುಗೌಡ್ರು ಎಲ್ಲರು ಶ್ರಮಿಸುತ್ತಿದ್ದೇವು ಅಲ್ಲದೆ ನನ್ನ ಸಹೋದರ ರಾಜುಗೌಡ ಅನೇಕ ಬಾರಿ ಸದನದಲ್ಲಿ ಧ್ವನಿ ಎತ್ತಿದ್ದಾರೆ,ಅಲ್ಲದೆ ನನ್ನನ್ನು ಟೀಕಿಸಿದ್ದಾರೆ,ಅವರು ನನ್ನನ್ನು ಟೀಕಿಸಿದ್ದರಲ್ಲಿ ಸ್ವಾರ್ಥ ಇರಲಿಲ್ಲ,ಆಗ ಟೀಕಿಸಿದ್ದರು,ಈಗ ಅವರೆ ಸನ್ಮಾನಿಸಿದ್ದಾರೆ,ಇದೆಲ್ಲವು ಸಮುದಾಯಕ್ಕಾಗಿ ಮಾಡಿರುವುದು ಎಂದರು.ಆದರೆ ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ನಮ್ಮ ಸರಕಾರವೇ ಬರಬೇಕಾಯಿತು.ಅದರ ಕ್ರೇಡಿಟ್‍ಕೂಡ ಸರಕಾರಕ್ಕೆ,ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಸಲ್ಲುತ್ತದೆ ಎಂದರು.

Contact Your\'s Advertisement; 9902492681

ಶಾಸಕ ರಾಜುಗೌಡ ಮಾತನಾಡಿ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗಾಗಿ ಗೃಹ ನಿರ್ಮಾಣ ಅನೇಕ ದಿನಗಳಿಂದ ಯೋಜನೆ ಉಳಿದುಕೊಂಡಿತ್ತು. ಇಂದು 1 ಕೋಟಿ 71 ಲಕ್ಷ ರೂಪಾಯಿಗಳಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ಅಲ್ಲದೆ ರಾಜ್ಯದಲ್ಲಿನ ಎಸ್‍ಸಿ,ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಲು ಶ್ರೀರಾಮುಲು ಅಣ್ಣಾ ಅವರು ಹಿಂದೆ ಮಾತು ಕೊಟ್ಟಂತೆ ಹೆಚ್ಚಿಸಲು ಶ್ರಮಿಸಿ ಇಡೀ ಸಮುದಾಯದ ಮೆಚ್ಚುಗೆಗಳಿಸಿದ್ದಾರೆ.ಅಲ್ಲದೆ ಅದಕ್ಕಾಗಿ ಶ್ರೀರಾಮುಲು ಅಣ್ಣಾ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ನಗರಸಭೆ ಅಧ್ಯಕ್ಷ ಸುಜಾತಾ ವಿ.ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here