ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ

0
56

ಕಲಬುರಗಿ: ಜಾತ್ಯತೀತ ಜನತಾದಳ ಜಿಲ್ಲಾ ಕಚೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಅಧ್ಯಕ್ಷ ಸುರೇಶ ಮಹಾಗಾಂವಕರ್ ರವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಹಾಗೂ ಮಾಜಿ ಪ್ರಧಾನಮಂತ್ರಿ ಎಚ್. ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಮ ಅವರ ಆದೇಶದಂತೆ ಪಂಚರತ್ನ ಯೋಜನೆಯ ರಥಯಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಯುವ ಅಧ್ಯಕ್ಷ ಸಮೀರ್ ಬಾಗವಾನ, ಮರಲಿಂಗಪ್ಪ ಕಿಣಿಕೇರಿ, ರಾಮಚಂದ್ರ ಅಟ್ಟೂರ್, ಡಾ.ಸಿದ್ದಣ್ಣ ಪಾಟೀಲ್, ಹಣಮಂತ ಕಂದಳ್ಳಿ, ಮಹಮ್ಮದ್ ಜಿಯಾ ವುದ್ದೀನ್, ಯುನೂಸ್ ಖಾನ್ (ಕೆಟಿಎಸ್), ಭವಾನಿ ಒಳಗೇರಿ, ಹಣಮಂತ್ರಾಯ ಸನಗುಂದಿ, ವಲಸನಕುಮಾರ್, ನರಸಯ್ಯ ಗುತ್ತೇದಾರ್, ಭೀಮರೆಡ್ಡಿಗೌಡ, ಮಹದೇವಿ ಕೆಸರಟಗಿ ,ಸವಿತಾ ಠಾಕೂರ್, ಎ.ಪಿ ನಾಡಗೌಡ, ಮಹಾನಂದ ಪಡಶೆಟ್ಟಿ, ಸುನಿತಾ ಕೋರವಾರ, ಬೀನಾ ಚಾಲ್ರ್ಸ್, ಕ್ರಿಸ್ಟಿನಾ ಚಾಲ್ರ್ಸ್, ಸೈಯದಾ ಬೇಗಂ, ಅಮಿರ್ ಶಾ, ಇಮ್ರಾನ್ ಖಾಲಿಕ್, ಜಲೀಲ್ ಪಾಷಾ, ಬಸೀರ್ ಪೇಟವಾರ್, ಮೋಯಿನ್ ಸೇಠ, ತುರುಬಾ ಭಾಯ್, ವಿಜಯಕುಮಾರ ಚಿಂಚನಸೂರ್, ಶ್ರೀನಿವಾಸ ಜಮಾದಾರ, ವಿಜಯಕುಮಾರ್ ಸಾವಳಗಿ, ಆನಂದ ಕೋರವಾರ, ತೀರ್ಥ ಹೀರಾ, ಮಹಮ್ಮದ ಅಜರ್, ಸಂಜು ಮಡ್ಕಿ, ಗುರುಲಿಂಗಪ್ಪಗೌಡ, ದಯಾನಂದ, ಕಲ್ಯಾಣಿ, ಸೈಯದ್ ಜಾಕಿರ್ ಇದ್ದರು.

Contact Your\'s Advertisement; 9902492681

ನಂತರ ಈ ಯಾತ್ರೆಯು ಪಕ್ಷದ ಕಚೇರಿಯಿಂದ ಹೊರಟು ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಖಾಜಾ ಬಂದೇನವಾಜ ದರ್ಗಾಕೆ ತೆರಳಿ ಪುಷ್ಪ ನಮನ ಸಲ್ಲಿಸಿ ಮರಳಿ ಜಗತವೃತ್ತದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ, ಬಾಬು ಜಗಜೀವನರಾಮ ಹಾಗೂ ಮಹಾತ್ಮ ಗಾಂಧೀಜಿಯವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here