2023-24ನೇ ಸಾಲಿನ ವಿಕಲಚೇತನ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

0
86

ಕಲಬುರಗಿ: 2023-24ನೇ ಸಾಲಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಪ್ರಿಮ್ಯಾಟ್ರಿಕ್ ಮತ್ತು ಪೋಸ್ಟ್ ಮ್ಯಾಟ್ರಿಕ್ ಹಾಗೂ ಮ್ಯಾರಿಟ್ ಕಮ್ ಮಿನ್ಸ್ ಓದುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲ್ಯಾಣ ಇಲಾಖೆ ಹಾಗೂ ಹಾಗೂ ವಿಕಲಚೇತ ಸಬಲಿಕರಣದ ಜಿಲ್ಲಾ ಅಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ದಿನಾಂಕ: 30.11,2023ರ ವರೆಗೆ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದ್ದು, ಪೋಸ್ಟ್‌ಮೆಟ್ರಿಕ್‌ ಹಾಗೂ ಟಾಪ್‌ ಕ್ಲಾಸ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ದಿನಾಂಕ:31.12,2023ನ್ನು ನಿಗದಿಪಡಿಸಲಾಗಿದ್ದು, ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಕಲಚೇತನರು ವ್ಯಾಸಂಗ ಮಾಡುತ್ತಿರುವ ಶಾಲಾ ಕಾಲೇಜುಗಳ ಮೊಲಕ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕಾಗಿದೆ.

Contact Your\'s Advertisement; 9902492681

ಅರ್ಜಿಗಳನ್ನು ಪರಿಶೀಲಿಸಿ ಆಯಾ ಶಾಲಾ ಕಾಲೇಜುಗಳವರು ಕೇಂದ್ರ ಸರ್ಕಾರದ ಪೋರ್ಟ್‌ಲ್‌ ಮೂಲಕ ದಾಖಲಿಸಬೇಕಾಗಿರುತ್ತದೆ. 9 ಮತ್ತು 10ನೇ ತರಗತಿಯ ಚಿಕಲಚೇತನ ವಿದ್ಯಾಥಿಗಳು NSP Portal ಮೂಲಕ ಅರ್ಜಿಸಲ್ಲಿಸಲು ಅನುಕೂಲವಾಗುವಂತೆ ತಮ್ಮ ವ್ಯಾಪ್ತಿಯ ಶೈಕ್ಷಣಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ (ಸಾರ್ವಜನಿಕ ಶಿಕ್ಷಣ ಇಲಾಖೆ) ಇಲಾಖೆಯ ಉಪ ನಿರ್ದೇಶಕರು ಹಾಗೂ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳ ಮುಖ್ಯಸ್ಥರುಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ ಹೆಚ್ಚಿನ ಸಂಖ್ಯೆಯ ವಿಕಲಚೇತನ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ತಂತ್ರಾಂಶ https://scholarships.gov.in/ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಮುಂದುವರೆದು ಪ್ರಿಮೆಟ್ರಕ್‌ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಲು ದಿನಾ೦ಕ: 30,11,2023ರವರೆಗೆ ಹಾಗೂ ಪೋಸ್ಟ್‌ ಮೆಟ್ರಿಕ್‌ ಮತ್ತು ಟಾಪ್‌ ಕ್ಲಾಸ್‌ಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ: 31,12,2023ರವರೆಗೂ ಕಾಲಾವಕಾಶವಿರುತ್ತದೆ. ಆದ್ದರಿಂದ ತಮ್ಮ ಜಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳನ್ನು ಸಂಪರ್ಕಿಸಿ ಹೆಚ್ಚಿನ ವಿಕಲಚೇತನ ವಿದ್ಯಾರ್ಥಿಗಳು https://scholarships.gov.in/ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಎಲ್ಲಾ ಶಾಲಾ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here