ಮಧುರ ಸ್ಮøತಿ ಪುಸ್ತಕ ಲೋಕಾರ್ಪಣೆ ಸಮಾರಂಭ ನ.5ರಂದು

0
148

ಕಲಬುರಗಿ: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಕಲಬುರಗಿ ದಕ್ಷಿಣ ತಾಲ್ಲೂಕು ಘಟಕದಿಂದ ನ.5ರಂದು ಸಂಜೆ 4.13ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ತಾಲೂಕು ಘಟಕ ಉದ್ಘಾಟನೆ,‘ಆದರ್ಶ ಉಪಾಧ್ಯಯರು’ ಪ್ರಶಸ್ತಿ ಪ್ರದಾನ ಮತ್ತು ಮಧುರ ಸ್ಮೃತಿ ಪುಸ್ತಕ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎಸ್‍ಕೆಯುಪಿಎಸ್ ಜಿಲ್ಲಾಧ್ಯಕ್ಷೆ ಸಾವಿತ್ರಿ ಪಾಟೀಲ್, ತಾಲ್ಲೂಕು ಅಧ್ಯಕ್ಷೆ ನಂದಿನಿ ಸನಬಾಲ್ ಹಾಗೂ ರಾಜ್ಯ ಉಪಾಧ್ಯಕ್ಷೆ ಸೇವಾಂತಾ ಚವ್ಹಾಣ ತಿಳಿಸಿದರು.

ಸಮಾರಂಭವನ್ನು ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಉದ್ಘಾಟಿಸುವರು. ಸಮಾಜ ಸೇವಕಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ್ ರೇವೂರ ಪೂಜೆ ನರವೇರಿಸಲಿದ್ದಾರೆ. ತಾಲೂಕು ಅಧ್ಯಕ್ಷೆ ನಂದಿನಿ ಸನಬಾಲ್ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಪ್ರಕಾಶ ಕುದರಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಎಸ್‍ಕೆಯುಪಿಎಸ್ ರಾಜ್ಯ ಉಪಾಧ್ಯಕ್ಷೆ ಡಾ.ಭಾಗ್ಯಲಕ್ಷ್ಮಿ ರೆಡ್ಡಿ ಪುಸ್ಕಕ ಪರಿಚಯ ಮಾಡಲಿದ್ದಾರೆ. ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ರಾಜಕುಮಾರ ರೆಡ್ಡಿ, ಮಹ್ಮದ್ ಇಬ್ರಾಹಿಂ, ಬಿಆರ್‍ಸಿ ಡಾ.ಪ್ರಕಾಶ ರಾಠೋಡ ಅವರು ಉಪಸ್ಥಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಎಸ್‍ಕೆಯುಪಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವ ವಗ್ದರ್ಗಿ, ರಾಜ್ಯ ಸಲಹೆಗಾರ ಬಾಬುರಾವ್ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷರಾದ ಡಾ.ನವಾಜ್ ಉಮರ್, ಡಾ.ವಂದನಾ ರಾಠೋಡ, ಕೆ.ಲೂಸಿ ಸಾಲ್ಡಾನ್, ಎಲ್.ಐ.ಲಕ್ಕಮ್ಮನವರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ರೇಣುಕಾ ಎಸ್., ಕಲ್ಯಾಣರಾವ್ ಬುರಾದಾರ್, ಶಶಿಕಲಾ ನರೋಣಾಕರ್, ನಿಂಬೆವ್ವ, ಅಂಬಿಕಾ, ವನಮಾಲಾ, ಜಯಶ್ರೀ, ಅನ್ನಪೂರ್ಣ ಚವ್ಹಾಣ, ಕಾಳಮ್ಮ, ಅಂಬುಜಾ, ಬಾಬುರಾವ ಕುಲಕರ್ಣಿ, ನಾಗೇಂದ್ರರಾವ್ ಇತರರಿದ್ದರು.

2022-23ನೇ ಸಾಲಿನ ಆದರ್ಶ ಉಪಾಧ್ಯಯರು ಹಾಗೂ ವಿವಿಧ ಕ್ಷೇತ್ರದ ಅನೇಕ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕೆಜಿ ವಿಭಾಗ, ಪ್ರಾಥಮಿಕ ವಿಭಾಗ, ಆದರ್ಶ ವಿದ್ಯಾಲಯ ವಿಭಾಗ, ಪ್ರೌಢ ವಿಭಾಗ, ತಂತ್ರಜ್ಞಾನ ವಿಭಾಗ, ಪೆÇಲೀಸ್ ವಿಭಾಗ, ಆರೋಗ್ಯ ರಕ್ಷಕ ವಿಭಾಗ, ಕರಣಿಕರು ವಿಭಾಗ, ಸಿಆರ್‍ಪಿ, ಬಿಆರ್‍ಪಿ, ಇಸಿಒ ವಿಭಾಗ, ಕಲಾವಿದರ ವಿಭಾಗ, ಚಿಗುರು ವಿಭಾಗದವರಿಗೆ ‘ಆದರ್ಶ ಉಪಾಧ್ಯಯರು’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. -ಸೇವಾಂತಾ ಚವ್ಹಾಣ, ರಾಜ್ಯ ಉಪಾಧ್ಯಕ್ಷೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here