ಕಲಬುರಗಿ: ಗಂಗೋತ್ರಿ ವೇದ ಪಾಠಶಾಲೆ 25ನೇ ವರ್ಷದ ರಜತಮಹೋತ್ಸವದ ನಿಮಿತ್ತ ಶಿವ ಕೇಶವ ಸತ್ರ ಅತಿರುದ್ರ ಯಾಗ ಮತ್ತು ಮಹಾ ಪವಮಾನ ಯಾಗ ಕಾರ್ಯಕ್ರಮ ಜರುಗಲಿದೆ ಎಂದು ವೆ. ಮೋಹನ್ ಭಟ್ ಜೋಶಿ ತಿಳಿಸಿದರು.
ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನ. 10ರಂದು ಬೆಳಿಗ್ಗೆ 7-45ಗಂಟೆಗೆ ಮಹಾಸಂಕಲ್ಪ ಪುಣ್ಯಾಹ, ಮಧುಪರ್ಕ ಕಾರ್ಯಕ್ರಮ ನಂತರ 9-30ಗಂಟೆಗ ಯಾಗಶಾಲಾ ಪ್ರವೇಶ ಪೀಠಸ್ಥಾಪನೆ, ಸ್ಥಾಲಿಪಾಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11ರಿಂದ 14ರವರೆಗೆ ಬೆಳಿಗ್ಗೆ 8ರಿಂದ 11ಗಂಟೆಯವರೆಗೆ ಸೇವಾಕರ್ತರ ಸಂಕಲ್ಪ ಪುಣ್ಯಾಹ ಮತ್ತು ಲಘುಪೂರ್ನಾಹುತಿ, 15ರಂದು ರುದ್ರಸ್ವಾಹಾಕಾರ, ಪವಮಾನ ಪಾರಾಯಣ ಹವನ, ಪೂರ್ಣಾಹುತಿ, ಆಶೀರ್ವಚನ ಜರುಗಲಿದೆ.
ಕಾರ್ಯಕ್ರಮಗಳಲ್ಲಿ ವಿ.ಸೋ.ತಿ ನಾಗರಾಜ ಅವರು ಉದ್ಘಾಟನಾ ಭಾಷಣ ಮಾಡುವರು. ಜ್ಞಾನರಾಜ ಮಹಾರಾಜರು ಅನುಗೃಹ ಭಾಷಣ, ಕು. ವಿಸ್ಮಿತಾ ಪ್ರಕಾಶ ಗಾಂಧಾರೀ ವಿದ್ಯಾ ಪ್ರದರ್ಶನ, ಎಚ್.ಎಸ್. ಸಚ್ಚಿದಾನಂದಮೂರ್ತಿ ಸಾಧಕರಿಗೆ ಸನ್ಮಾನದ ಮುಖ್ಯ ಭಾಷಣ ಮಾಡುವರು, ವಿದ್ಯಾವಿಶ್ವಶ್ವರ ಭಾರತೀ ಅನುಗ್ರಹ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.