ಕಲಬುರಗಿ: ಎಸ್ಟಿ ಪಟ್ಟಿಯಲ್ಲಿರುವ ತಳವಾರ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಮಾಣ ಪತ್ರ ನೀಡುವಲ್ಲಿ ತೊಂದರೆ ಮತ್ತು ವಂಚನೆ ಮಾಡುತ್ತಿದ್ದು, ಆ ತೊಂದರೆಯನ್ನು ನಿವಾರಿಸಿ ಪ್ರಮಾಣ ಪತ್ರ ವಿತರಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಬುಡುಕಟ್ಟು ಸಂರಕ್ಷಣಾ ಸಮಿತಿ ಸಂಘದ ಅಮರೇಶ ಕಾಮನಕೇರಿ ಆಗ್ರಹಿಸಿದರು.
1987ರಿಂದ ನಾಯ್ಕಡ ಪರ್ಯಾಯ ಪದವಾಗಿ ಎಸ್ಟಿ ಸೇರ್ಪಡೆಯಾಗಿ ಎಸ್ಟಿ ಪ್ರಮಾಣ ಪತ್ರ ಪಡೆಯಲು ನಿರಂತರ ಹೋರಾಟ ಮಾಡಿ 2020ರಲ್ಲಿ ನಾಯ್ಕಡದ ಪರ್ಯಾಯ ಪದವಾಗಿ ಎಸ್ಟಿ ಸೇರ್ಪಡೆಯಾಗಿರುವ ತಳವಾರ ಜಾತಿ ಜನಾಂಗದವರಿಗೆ ತ್ವರಿತವಾಗಿ ಎಸ್ಟಿ ಪ್ರಮಾಣಪತ್ರ ವಿತರಣೆಯಾಗಬೇಕು ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ತಳವಾರ ಜಾತಿ ಜನಾಂಗದವರು ಅರ್ಜಿ ಸಲ್ಲಿಸುವಾಗ ನಾಯ್ಕಡ (ಪರಿವಾರ, ತಳವಾರ) ಎಂದು ತಂತ್ರಾಶದಲ್ಲಿ ಅರ್ಜಿ ಸಲ್ಲಿಸಬೇಕೆಂದು ಮನವಿ ಮಾಡಿದರು. ಮಹಾದೇವಪ್ಪ ಜಮಾದಾರಮ ಡಾ. ಹಣಮಂತ ಎಸ್.ಡಿ., ಸಿದ್ದರಾಮ ತಳಹಳ್ಳಿ, ರಾಮು ಚೆನ್ನೂರ ಮತ್ತಿತರರಿದ್ದರು.