ಆಧುನಿಕ ಜೀವನಕ್ಕೆ ಶರಣರ ಸಂದೇಶಗಳು ಪ್ರೇರಣೆಯಾಗಲಿ: ಪ್ರೊ. ಶಿವರಾಮ ಗೌಡರು

0
128

ಕಲಬುರಗಿ: ಶರಣ ಶರಣೆಯರು ಅಂದು ನಮಗೆ ನೀಡಿದ ಸಾಂಸ್ಕೃತಿಕ ಪರಂಪರೆಯನ್ನು ನಾವು ಮರೆಯುವಂತಿಲ್ಲ. ಇಂದಿನ ಯುವ ಪೀಳಿಗೆ ಶರಣ ಪರಂಪರೆಯ ಮಹತ್ವವನ್ನುಅರಿತುಆಧುನಿಕತೆಯ ನೈಜ ಬಣ್ಣವನ್ನು ಕಳೆದು, ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಸಾರ್ಥಕತೆಬರುತ್ತದೆ.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸಮ್ಮ ಸಿದ್ರಾಮಯ್ಯ ಸಿರವಾರ ಸ್ಮರಣಾರ್ಥ ಅರಿವಿನ ಮನೆಯ ದತ್ತಿ ಕಾರ್ಯಕ್ರಮದಲ್ಲಿ ‘ಆಧುನಿಕ ಜೀವನ ಶರಣರ ಸಂದೇಶ’ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದ ವಿ.ಟಿ.ಯು ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಶಿವರಾಮ ಗೌಡರು ಸಂಸ್ಕೃತಿ, ಸಂಸ್ಕಾರ, ಸಂಗ, ತ್ಯಾಗ, ನುಡಿ, ತಾಳ್ಮೆ, ನಂಬಿಕೆ, ಮತ್ತು ಸ್ವಾಭಿಮಾನ ಇವುಗಳಲ್ಲಿ ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ಕಟ್ಟಬಹುದು.

Contact Your\'s Advertisement; 9902492681

ಶರಣರು ಏಕ ದೇವೋಪಾಸಕರಾಗಿ ಧರ್ಮವನ್ನು ಆಚರಿಸುವಲ್ಲಿ ಇಡೀ ವಿಶ್ವಕ್ಕೆ ಮಾದರಿಯಾದರು. 800 ವರ್ಷಗಳ ಹಿಂದೆಯೇ ಧರ್ಮದ ಹೆಸರಿನಲ್ಲಿರಬಹುದಾದ ಮೌಢ್ಯತೆಯನ್ನು ವಿರೋಧಿಸಿದರು. ಪ್ರಕೃತಿ, ಸಂಸ್ಕೃತಿ ಮತ್ತು ವಿಕೃತಿ ಇವುಗಳ ಮಹತ್ವವನ್ನು ಅರಿತು ವಿಚಾರವಂತರಾಗಿ ಮೌಲಿಕಜೀವನವನ್ನು ನಾವು ನಡೆಸಬೇಕಾಗಿದೆ. ಸಂಸ್ಕಾರವನ್ನು ಪಡೆದ ವ್ಯಕ್ತಿ ಯಾವುದೇ ಜಾತಿಯವನಾದರೂ ಶರಣ ಪರಂಪರೆಗೆ ಸೇರುತ್ತಾನೆ ಶಿವನಾಗುತ್ತಾನೆ. ಅವನ ಪೂರ್ವಾಶ್ರಮದ ಬಗೆಗೆ ಯೋಚಿಸುವುದು ಸಲ್ಲದು. ಉತ್ತಮರ ಸಂಗದಿಂದ ಮಾತ್ರ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆಯವರು ವಿಶ್ವದ ಯಾವುದೇ ಧರ್ಮದಲ್ಲಿ ಅಥವಾ ಯಾವುದೇ ಜನಾಂಗದಲ್ಲಿರಬಹುದಾದ ಮೌಲ್ಯಗಳು ವಚನ ಸಾಹಿತ್ಯದಲ್ಲಿ ಕಂಡುಬರುತ್ತವೆ. ಹೀಗಾಗಿಯೇ ಈ ವಚನ ಸಾಹಿತ್ಯ ವಿಶ್ವ ಮಟ್ಟಕ್ಕೆ ನಿಲ್ಲಬಹುದಾದ ಮೌಲಿಕ ವಿಚಾರಗಳನ್ನು ತನ್ನಲ್ಲಿ ಒಳಗೊಂಡಿದೆ ಎಂದರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ,ಉಪಾಧ್ಯಾಕ್ಷ ಡಾ. ಜಯಶ್ರೀ ದಂಡೆ, ಹಾಗೂ ದತ್ತಿ ದಾಸೋಹಿ  ಎಸ್. ಬಸವರಾಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here