ಕಲಬುರಗಿ: ಶ್ರೀ ವಿಜಯದಾಸರ ಆರಾಧನೆ

0
43

ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ದಾಸವರೇಣ್ಯರಾದ ಶ್ರೀ ವಿಜಯದಾಸರ ಆರಾಧನೆಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದಿಗೆ ಆಚರಿಸಲಾಯಿತು.

ಜಯತೀರ್ಥ ಮಹಿಳಾ ಭಜನಾ ಮಂಡಳಿ ವತಿಯುಂದ ಭಜನೆ. ವಿಜಯರಾಯರ ಕವಚ ಪಾರಾಯಣ. ನಂತರ ಪಂ ಭಾರತೀಶಾಚಾರ್ಯ ಅವರಿಂದ ಪ್ರವಚನ.ನಂತರ ಕಾರ್ತೀಕ ದೀಪೆÇೀತ್ಸವ, ಮಾಹಾಮಂಗಳಾರತಿ, ನೆರವೇರಿತು. ಈ ಸಂದರ್ಭದಲ್ಲಿ ಅರ್ಚಕರಾದ ಗುಂಡಾಚಾರ್ಯ ಜೋಶಿ ನರಿಬೊಳ ಮಾತನಾಡಿ ದಾಸಸಾಹಿತ್ಯದ ದೃವತಾರೆ ಶ್ರೀ ವಿಜಯದಾಸರು ದಾಸಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

Contact Your\'s Advertisement; 9902492681

ಅನೇಕ ಪುರಾಣ ವೇಧ ಉಪನಿಷತ್ತಿನ ತತ್ವಗಳನ್ನು ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಹಾಡುಗಳನ್ನು ಸುಳಾಧಿಗಳನ್ನು ರಚನೆ ಮಾಡಿ ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆಯನ್ನು ನೀಡಿದ ಮಾಹಾನುಭಾವರು.  ದಾಸರು ಹೇಳಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ. ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ನಾವು ನಮ್ಮ ಮಕ್ಕಳು ದಾಸರು ರಚಿಸಿದ ಹಾಡುಗಳನ್ನು ಮನೆಯಲ್ಲಿ ಪಾರಾಯಣ ಮಾಡಿದರೆ ಯಾವುದೇ ಸಂಕಟಗಳು ಬರುವದಿಲ್ಲ ಎಂದು ಹೇಳಿದರು.

ಗೋಪಾಲರಾವ ಕುಲಕರ್ಣಿ, ಶಾಮರಾವ, ಪುರುಷೋತ್ತಮ ಮಠ, ಗುರುರಾಜ ಬಂಕುರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here