ಗ್ರಾ.ಪಂ ಸಿಬ್ಬಂದಿಗಳ ಬೇಡಿಕೆ ಈಡೇರಿಕೆ | 15ನೇ ಹಣಕಾಸಿನಲ್ಲಿ ಅವ್ಯವಹಾರ ತನಿಖೆಗೆ ಆಗ್ರಹ

0
16

ಕಲಬುರಗಿ: 15ನೇ ಹಣಕಾಸಿನಲ್ಲಿ ಕಮಲಾಪೂರ, ಕಲಬುರಗಿ, ಕಾಳಗಿ, ಚಿಂಚೋಳಿ, ಅಫಜಲಪೂರ ತಾಲೂಕಿನಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಮಗ್ರ ತಿನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ಸುನೀಲ್ ಮಾನ್ಪಡೆ ಅವರು ನೇತೃತ್ವದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ  ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಸಿಬ್ಬಂದಿಗಳನ್ನು 2.0 ಪಂಚತಂತ್ರದಲ್ಲಿ ನೊಂದಾಯಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಜಿಲ್ಲಾ ಪಂಚಾಯತ ಅನುಮೋದನೆ ನೀಡಲು ಕ್ರಮ ಕೈಗೊಳ್ಳಬೇಕು.  ಅನುಕಂಪದ ನೇಮಕಾತಿಗಳು ಬಾಕಿ ಇದ್ದು ಕೂಡಲೇ ನೇಮಕಾತಿ ನೀಡಲು ನಿರ್ದೇಶನ ನೀಡಬೇಕು.  15ನೇ ಹಣಕಾಸಿನಲ್ಲಿ ಬಾಕಿ ಇರುವ 10-18 ತಿಂಗಳು ವೇತನ ನೀಡಲು ಕ್ರಮ ಕೈಗೊಳ್ಳಬೇಕು.  ಪಂಚಾಯತಗಳಲ್ಲಿ ಅಕ್ರಮ ನೇಮಕಾತಿ ತಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು.  ಕಲಬುರಗಿ ಜಿಲ್ಲೆ ಕಮಲಾಪೂರ ತಾಲ್ಲೂಕಿನ 11 ಹಳ್ಳಿಗಳಿಗೆ ಶುದ್ಧ ಕುಡಿಯುವ  ನೀರಿನ ಯೋಜನೆಗೆ ಅನುಮೋದನೆ ನೀಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here