ಸುರಪುರ: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಘಟನೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ದಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ದೌರ್ಜನ್ಯ ಮತ್ತು ಕೊಲೆ ಘಟನೆ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ.ಕೂಡಲೇ ಘಟನೆಯ ಎಲ್ಲಾ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಕಾಳಪ್ಪ ಕವಾತಿ,ಭೀಮರಾಯ ಮೂಲಿಮನಿ,ರಂಗನಗೌಡ ದೇವಿಕೇರಿ,ನಿಂಗಣ್ಣ ಕಾಡ್ಲೂರ,ಭೀಮಣ್ಣ ನಾಗರಾಳ,ಕೃಷ್ಣಾ ಬಾದ್ಯಾಪುರ,ಮಾಳಪ್ಪ ಮಾಚಗುಂಡಾಳ,ವಿಜಯಕುಮಾರ ಮಂಗಿಹಾಳ,ನಿಂಗರಾಜ ಬಾಚಿಮಟ್ಟಿ,ಬೀರಲಿಂಗ ಬಾದ್ಯಾಪುರ,ರವಿಚಂದ್ರ ಆಲ್ದಾಳ,ಪರಮಣ್ಣ ಹಾಲಬಾವಿ,ಮಾಳಪ್ಪ ಮಾಲಹಳ್ಳಿ,ಮಲ್ಲಪ್ಪ ಹುಬ್ಬಳ್ಳಿ,ಮಲ್ಲಣ್ಣ ಐಕೂರ,ಜುಮ್ಮಣ್ಣ ಕೆಂಗುರಿ,ಚಂದ್ರು ಕುಂಬಾರಪೇಟ,ಧರ್ಮರಾಜ ಮಂಗಿಹಾಳ,ನಿಂಗು ಐಕೂರ,ಸಿದ್ರಾಮ ಎಲಿಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.