ಸುರಪುರ; ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ವಾಗಣಗೇರಾ,ಬೋನಾಳ,ಚಿಕ್ಕನಹಳ್ಳಿ,ಮಂಗಿಹಾಳ ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ಭತ್ತ ಹತ್ತಿ ತೊಗರಿ ಮತ್ತಿತರೆ ಬೆಳೆ ಹಾನಿ ಪ್ರದೇಶಕ್ಕೆ ಭಾನುವಾರ ಶಾಸಕ ರಾಜುಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ,ವiಹಾಮಳೆಗೆ ಭತ್ತ ಹತ್ತಿ ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿರುವುದನ್ನು ಕಂದಾಯ ಇಲಾಖೆ ಸರಿಯಾದ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.ಜೊತೆಗಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ತಿಳಿಸಿ,ಪ್ರತಿ ಗ್ರಾಮದಲ್ಲಿನ ಎಲ್ಲಾ ರೈತರ ಜಮೀನುಗಳಿಗೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ಮಾಡುವಂತೆ ತಿಳಿಸಿದರು.ಯಾವುದೇ ರೈತನ ಜಮೀನು ಲೋಪವಾಗದಂತೆ ಸರಿಯಾದ ಸಮೀಕ್ಷೆ ಮಾಡುವಂತೆ ತಿಳಿಸಿದರು.ಅಲ್ಲದೆ ಶೀಘ್ರದಲ್ಲಿಯೆ ಬೆಳೆ ಹಾನಿಗೊಳಗಾದ ರೈತರಿಗೆ ಸರಕಾರ ದಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಮಾತನಾಡಿ,ಕೂಡಲೇ ನಮ್ಮ ಕಂದಾಯ ಇಲಾಖೆ ಸಿಬ್ಬಂದಿಗಳಿಂದ ಎಲ್ಲಾ ಗ್ರಾಮಗಳಲ್ಲಿ ಜಮೀನುಗಳ ಸಮೀಕ್ಷೆ ಮಾಡಿ ಅದರ ವರದಿಯನ್ನು ಆಯಾ ಗ್ರಾಮಗಳಲ್ಲಿ ಅಂಟಿಸಲಾಗುವುದು,ವರದಿಯ ಪಟ್ಟಿಯಲ್ಲಿ ರೈತರ ಹೆಸರು ತಪ್ಪಿ ಹೋಗಿದ್ದರೆ ಅಂತವರು ಮಾಹಿತಿ ನೀಡಬಹುದು ಹಾಗೂ ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಜಮೀನಿನ ಕುರಿತು ಸಾರ್ವಜನಿಕರು ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಗುರುನಾಥ,ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ದೊಡ್ಡದೇಸಾಯಿ ದೇವರಗೋನಾಲ,ಭೀಮಣ್ಣ ಬೇವಿನಾಳ,ಮೇಲಪ್ಪ ಗುಳಗಿ,ಕೃಷ್ಣಾರಡ್ಡಿ ಮುದನೂರ ಸೇರಿದಂತೆ ಅನೇಕರಿದ್ದರು.