ಶಹಾಬಾದ: ಕೆ.ಪಿ.ಸಿ.ಸಿ. ಅಧ್ಯಕ್ಷ ಸತೀಶ್ ಜಾರಕಿ ಹೊಳಿ ಅವರ ಹಿಂದೂ ಅಶ್ಲೀಲ ಪದ ಹೇಳಿಕೆಯನ್ನು ಖಂಡಿಸಿ ಗುರುವಾರ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಗರದ ಶ್ರೀರಾಮ ವೃತ್ತದಿಂದ ಮೆರವಣಿಗೆ ನಡೆಸಿ, ನೆಹರು ವೃತ್ತದ ಬಳಿ ಪ್ರತಿಭಟನೆ ನಡೆಸಿ ಸತೀಶ್ ಜಾರಕಿ ಹೊಳಿ ಅವರ ಪ್ರತಿಕೃತಿ ದಹನ ಮಾಡಿದರು.
ಬಿಜೆಪಿ ಮುಖಂಡರಾದ ಬಸವರಾಜ ಮದ್ರಿಕಿ,ಅರುಣ ಪಟ್ಟಣಕರ್ ಹಾಗೂ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, ಹಿಂದೂ ಎಂಬ ಪದವನ್ನು ಅಶ್ಲೀಲ ಎಂಬ ಹೇಳಿಕೆ ನೀಡಿ ಸನಾತನ ಧರ್ಮದ ಬುಡಕ್ಕೆ ಕೈ ಹಾಕಿರುವುದು ಅವರ ಮೂರ್ಖತನದ ಪರಮಾವಧಿಯಾಗಿದೆ ಈ ಹೇಳಿಕೆಯಿಂದ ದೇಶಕ್ಕೆ ಅಪಮಾನ ಮಾಡಿದಂತಾಗಿದೆ.ಕೇವಲ ಓಟಿಗಾಗಿ ರಾಜಕೀಯವಾಗಿ ನೀಡಿರುವಂತ ಹೇಳಿಕೆಯು ಅವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ಸತೀಶ್ ಜಾರಕಿ ಹೊಳಿ ಅವರು ತಮ್ಮ ವ್ಯಾಸಂಗ ಅವಧಿಯಲ್ಲಿನ ಟಿ.ಸಿ. ದಾಖಲಾತಿಗಳಲ್ಲಿನ ಜಾತಿ-ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೋಧಿಸದೆ ಯಾವ ಧರ್ಮದ ಹೆಸರನ್ನು ಹಾಕಿರುತ್ತಾರೆ ಎಂಬುದನ್ನು ಪರಿಶೀಲಿಸಿ ನಂತರ ಅವರು ಹೇಳಿಕೆಗಳನ್ನು ವ್ಯಾಖನಿಸಲಿ. ಹಿಂದೂ ಎಂಬುವುದು ಭಾರತೀಯರ ನಾಗರೀಕತೆಯ ಸಂಕೇತವಾಗಿದೆ. ಅದೊಂದು ಜೀವನ ಪದ್ಧತಿ. ನಮ್ಮ ಭಾವನೆಗಳಿಗೆ ಗೌರವ ಮತ್ತು ಸಂಕೇತದ ಬೆಳವಣಿಗೆಗೆ ಪೂರಕವಾಗಿದೆ. ಅದರೆ ಅಲ್ಪಸಂಖ್ಯಾತರನ್ನು ಒಲೈಸಿ ಕೊಳ್ಳಲು ತನ್ನ ಧರ್ಮವನ್ನೆ ಟೀಕಿಸಿ ಖಂಡಿಸುವಂಥ ಹೇಳಿಕೆಗಳನ್ನು ರಾಜ್ಯದ ಜನತೆ ಕ್ಷಮಿಸಲಾರರು. ಸಾರ್ವಜನಿಕ ವಲಯದಲ್ಲಿ ಅವರ ಹೇಳಿಕೆಯಿಂದ ಅಶಾಂತಿ, ಅಸಹನೆ ಭುಗಿಲೆದ್ದಿದೆ. ಕಾನೂನು ಸುವ್ಯವಸ್ಥೆಗಳ ಪಾಲನೆ ಧಕ್ಕೆಯುಂಟಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಂಧಿಸ ಬೇಕೆಂದು ಒತ್ತಾಯಿಸಿದರು.
ಸತೀಶ್ ಜಾರಕಿ ಹೊಳಿ ಹಿಂದೂ ವಿರೋಧಿ, ದೇಶದ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಕೆಲ ಕಾಲ ರಸ್ತೆ ತಡೆ ಮಾಡಿ ನಂತರ ಸತೀಶ್ ಜಾರಕಿ ಹೊಳಿ ಅವರ ಪ್ರತಿಕೃತಿಯನ್ನು ದಹಿಸಿದರು.
ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಗೊಳೇದ್, ಪ್ರಮುಖರಾದ ನಾಗರಾಜ ಮೇಲಗಿರಿ,ಸೂರ್ಯಕಾಂತ ವಾರದ,ನಿಂಗಣ್ಣ ಹುಳಗೊಳಕರ್,ಮಹಾದೇವ ಗೊಬ್ಬೂರಕರ,ಸದಾನಂದ ಕುಂಬಾರ,ಬಸವರಾಜ ಬಿರಾದಾರ,ದೇವವದಾಸ ಜಾಧವ,ಸಾಯಿಬಣ್ಣ ಬೆಳಗುಂಪಿ, ಸಂಜಯ ಕೋರೆ, ವಿರೇಶ ಬಂದಳ್ಳಿ, ರಾಜು ದಂಡಗುಲಕರ, ತಿಮ್ಮಣ್ಣ ಕುರಡೆಕರ, ಯಲ್ಲಪ್ಪ ದಂಡಗುಲಕರ, ಶಂಕರ ಬಗಾಡೆ, ಬಸವರಾಜ ಸಾತ್ಯಾಳ, ರಾಮು ಕುಸಾಳೆ, ಶಿವಶರಣಪ್ಪ ಜಟ್ಟೂರ, ದತ್ತಾತ್ರೇಯ ಘಂಟಿ,ಜಗದೇವ ಸುಬೇದಾರ, ಚಂದ್ರಕಾಂತ ಸುಬೇದಾರ, ಶ್ರೀನಿವಾಸ ದೇವಕರ,ಈರಣ್ಣ ನಾಲವಾರ, ಶಿವಾಜಿ ಪವಾರ, ರಹಿಮಸಾಹೇಬ ಯುವಮೊರ್ಚಾ ಪ್ರ.ಕಾರ್ಯದರ್ಶಿ ರಾಕೇಶ ಮಿಶ್ರ, ಆಶೀಷ ಮಂತ್ರಿ, ಶರಣು ಕೌಲಗಿ, ಅಮಿತ ಠಾಕೂರ, ಶ್ರೀನಿವಾಸ ನೆದಲಗಿ, ಉಮೆಶ ನಿಂಬಾಳಕರ, ಪ್ರಭು ಪಾಟಿಲ, ಬಾಬು ಕೊಬಾಳ, ಅಮೂಲ ಪೆÇದ್ದಾರ, ಸುರೆಂದ್ರ ಗೌಳಿ, ಸುನೀಲ ಮೆದಾ, ರಾಜು ಸುರ್ಯವಂಶಿ, ಅಶೊಕ ದೆವಕರ, ಉದಯ ನಂದಗೌಳಿ, ಸಚಿನ ಹಂಚಾಟೆ, ಸಚಿನ ಛಪ್ರಬಂದ, ರೇವಣಸಿದ್ದ ಮತ್ತಿಮುಡ, ಜ್ಯೋತಿ ಶರ್ಮ, ಶಶಿಕಲಾ ಸಜ್ಜನ, ಜಯಶ್ರೀ ಸೂಡಿ, ಲತಾ ಸಂಜೀವ ಇತರರು ಇದ್ದರು.