15ನೇ ಶರಣತತ್ವ ಕಮ್ಮಟಕ್ಕೆ ಚಾಲನೆ | ಬಸವಾಕ್ಷರ ಬದುಕಿನ ಮೂಲ ಮಂತ್ರವಾಗಬೇಕು

0
209

ದಾವಣಗೆರೆಯ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ನ ಸಿದ್ಧಮಲ್ಲಪ್ಪ ಅಜ್ಜಂಪುರಶೆಟ್ರು. ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಟ್ರಸ್ಟ್ಸ್ಥಾ ಪಿಸಿದ್ದಾರೆ. ವರ್ಷಕ್ಕೆ ಎರಡು ಬಾರಿ ರಾಜ್ಯದ ಮಸ್ಕಿ, ದಾವಣಗೆರೆ, ಬೆಂಗಳೂರು, ಕೊಪ್ಪಳ ಸೇರಿದಂತೆ ಅನೇಕ ಕಡೆ ಶರಣತತ್ವ ಕಮ್ಮಟ ನಡೆಸುತ್ತ ಬಂದಿದ್ದಾರೆ.

ಕಲಬುರಗಿ: ಮನುಷ್ಯ ಇಷ್ಟಲಿಂಗ ಧಾರಿಯಾದ ಬಳಿಕ ಏಕದೇವೋಪಾಸಕನಾಗಬೇಕು. ಲಿಂಗಾಯತರು ಜಾತಿ ಮತಗಳನ್ನು ಮೀರಬೇಕು. ಬಸವಾಕ್ಷರ ಬದುಕಿನ ಮೂಲ ಮಂತ್ರವಾಗಬೇಕು ಕಲಬುರಗಿ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲ್ಬುರ್ಗಿ ತಿಳಿಸಿದರು.

Contact Your\'s Advertisement; 9902492681

ಲಿಂ ಶರಣೆ ಪುಟ್ಟಮ್ಮ ಲಿಂ. ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಮತ್ತು ಬಸವ ಬಳಗ ದಾವಣಗೆರೆ ಹಾಗೂ ಕಲಬುರಗಿಯ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಜರುಗಿದ 15ನೇ ಶರಣತತ್ವ ಕಮ್ಮಟ ಉದ್ಘಾಟನಾ ಸಮಾರಂಭದಲ್ಲಿ ವಚನ ಸಂಪುಟಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಬಸವತತ್ವ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಲ್ಯಾಣ ಶರಣರು ವಿಷಯ ಕುರಿತು ಬಿ.ಡಿ.‌ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ಮಾತನಾಡಿ, ಶೂನ್ಯಪೀಠಾಧ್ಯಕ್ಷ ಅಲ್ಲಮಪ್ರಭು ಮತ್ತು ಮಡಿವಾಳ ಮಾಚಿದೇವ ಕಲ್ಯಾಣದ ಅನುಭವ ಮಂಟಪಕ್ಕೆ ಶರಣರನ್ನು ಕರೆತರುವ ಮೂಲಕ ಕಲ್ಯಾಣದ ಶರಣರೊಂದಿಗೆ ಜೋಡಿಸಿ ಬಸವ ಚಳವಳಿಗೆ ಹೆಗಲೆಣೆಯಾಗಿ ನಿಂತರು ಎಂದು ಅಭಿಪ್ರಾಯಪಟ್ಟರು.

ಪಾಲ್ಕುರಿಕೆ ಸೋಮನಾಥನ ಗ್ರಂಥಗಳು ಹಾಗೂ ಫ.ಗು. ಹಳಕಟ್ಟಿಯವರ ಸಂಪಾದನೆಯನ್ನು ಗಮನಿಸಿ ಹೇಳುವುದಾದರೆ, ಶರಣರು ಬದುಕಿದ್ದಾಗಲೇ ಅವರ ಇತಿಹಾಸ ದಾಖಲಾಗಿರುವುದು ಅಭೂತಪೂರ್ವ ಶೋಧವಾಗಿದೆ. ಕಲ್ಯಾಣದಲ್ಲಿ ಆಗ 1600 ಶರಣರು ಇದ್ದರು. 250 ಶರಣೆಯರ ಹೆಸರುಗಳು ದೊರೆಯುವುದು ಮುಖ್ಯವಾದ ಸಂಗತಿ ಎಂದರು.

ಬಸವಣ್ಣನ ಶರಣ ಸಂಘಟನೆ 675 ಜನರು 175 ಕಾಯಕ ಮಾಡುವ ಶರಣರು ಇದ್ದರು ಎಂಬ ಸಂಗತಿ ದಾಖಲೆಗಳಿಂದ ತಿಳಿದು ಬರುತ್ತದೆ.

ಬಿಜ್ಜಳನ ಆಸ್ಥಾನದಲ್ಲಿ ಕೆಲಸ ಮಾಡುವವರು ಎಲ್ಲರೂ ಬಸವಾನುಯಾಯಿಗಳಾಗಿದ್ದರು. ಗಾಳಿ ಹಾಕುವ ಕೆಲಸ ಮಾದರಸ ಮಾಡುತ್ತಿದ್ದರು. ಶಹಾಬಾದ ಸಮೀಪದ ಇಂಗಳಗಿಯ ಮೂಲೇಶ್ವರ ದೇವಸ್ಥಾನದ ಎದುರು ಅಚಲವ್ವೆ, ಗುಡ್ಡವ್ವೆ ಅವರು ಸ್ಥಾಪಿಸಿದ ಏಳು ಜನ ಲಿಂಗಗಳಿವೆ ಎಂದು ಉಲ್ಲೇಖಿಸಿದರು.

ದಾವಣಗೆರೆ ಬಸವ ಬಳಗದ ಹುಚ್ಚಪ್ಪ ಮಾಸ್ತರ ಅಧ್ಯಕ್ಷತೆ ವಹಿಸಿದ್ದರು. ಬಸವ ಬಳಗದ ಶತಾಯುಷಿ ವಿ. ಸಿದ್ಧರಾಮಣ್ಣನವರು ಷಟಸ್ಥಲ ದ್ವಜಾರೋಹಣ ನೆರವೇರಿಸಿದರು.

ಬಸವ ಸಮಿತಿ ಕೇಂದ್ರ ಅಧ್ಯಕ್ಷ ಅರವಿಂದ ಜತ್ತಿ, ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ, ವಿಟಿಯು ಪ್ರಾದೇಶಿಕ ನಿರ್ದೇಶಕ ಪ್ರೊ. ಬಸವರಾಜ ಗಾದಗೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಶಂಭುಲಿಂಗಪ್ಪ ಅಜ್ಜಂಪುರಶೆಟ್ರು ವೇದಿಕೆಯಲ್ಲಿದ್ದರು.

ಕೆ. ರುದ್ರಪ್ಪ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಸ್ನೇಹಾ ರೇಷ್ಮಿ ವಚನ ನೃತ್ಯಗೈದರು.

ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಬಸವರಾಜ ಮೊರಬದ, ಭಾರತಿ ರೇಷ್ಮಿ, ಶರಣಪ್ಪ ನಿರಗುಡಿ, ಡಾ. ಕೆ.ಎಸ್. ವಾಲಿ, ಧನರಾಜ ತಾಂಬೋಳೆ, ವಿಶ್ವನಾಥ ಮಂಗಲಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here