ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ ವರ್ಷಾಚರಣೆ

0
7

ವಾಡಿ: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಪಟ್ಟಣದ ಹಲವಾರು ಶಾಲೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ನೇತಾಜಿ ‘ಜೀವನ ಸಂಘರ್ಷ’ ಕುರಿತು ವಿಚಾರ ಸಂಕೀರಣ ಮಾಡಲಾಯಿತು.

ಪಟ್ಟಣದ ಮಾತೋಶ್ರೀ ರಮಾಬಾಯಿ ಮತ್ತು ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ವಿಚಾರ ಸಂಕೀರಣ ಕುರಿತು ಮಾತನಾಡಿದ AIDSO ಜಿಲ್ಲಾ ಉಪಾಧ್ಯಕ್ಷೆ ಸ್ನೇಹ ಕಟ್ಟಿಮನಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಎಳೆಯ ವಯಸ್ಸಿನಲ್ಲೇ ಹೋರಾಟದ ಸ್ಪೂರ್ತಿ ಹೊಂದಿದ್ದವರು ನೇತಾಜಿ. ಎಲ್ಲಾ ರೀತಿಯ ಅನುಕೂಲಕರ ಕುಟುಂಬದಲ್ಲಿ ಬೆಳೆದ ನೇತಾಜಿಗೆ ಕಾಡಿದ ದೊಡ್ಡ ಪ್ರಶ್ನೆ ಎಂದರೆ ತಮ್ಮ ಮನೆಯ ಮುಂದೆ ವಯಸ್ಸಾದ, ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದ ಆ ವಯಸ್ಸಾದ ಅಜ್ಜಿಯ ಕಷ್ಟ ನೋಡಿ ಯಾಕೆ ಸಮಾಜದಲ್ಲಿ ಈ ರೀತಿಯಾದ ತಾರತಮ್ಯ?. ಇಂತಹ ಸಮಸ್ಯೆ ನಿವಾರಿಸಲು ನಮ್ಮ ಮುಂದೆ ಇರುವ ದಾರಿ ಎಂದರೆ ಒಗ್ಗಟ್ಟಾಗಿ ಹೋರಾಡುವುದು, ಈ ಆಲೋಚನೆಯು ನೇತಾಜಿ ಅವರಿಗೆ ಎಲ್ಲಾ ಅಡೆ ತಡೆಗಳನ್ನು ಮಿರಿ ದೇಶದ ಸ್ವಾತಂತ್ರ್ಯಕ್ಕಾಗಿ ಮುನ್ನುಗ್ಗಲು ಪ್ರೇರಣೆ ನೀಡಿತು.

Contact Your\'s Advertisement; 9902492681

ಕೇವಲ ಬ್ರಿಟಿಷರಿಂದ ಈ ದೇಶವನ್ನು ಮುಕ್ತಿಗೊಳಿಸದೆ, ದುಡಿಯುವ ಜನಗಳ ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಲು ಅವರು ಯಾವ ರಾಜೀಯು ಇಲ್ಲದೆ ಹೋರಾಡಿದರು. ನೇತಾಜಿ ಅವರ ಕನಸು ಶಿಕ್ಷಣ ಕೂಡ ಪ್ರತಿಯೊಬ್ಬರ ಹಕ್ಕಾಗಬೇಕು. ಜಾತಿ ಧರ್ಮವು ಶಿಕ್ಷಣದಿಂದ ದೂರವಿರಬೇಕು. ಧರ್ಮನಿರಪೇಕ್ಷಿತ ಶಿಕ್ಷಣ ನಮ್ಮದಾಗಬೇಕು ಎಂದು ನೇತಾಜಿ ಕರೆ ನೀಡಿದರು.

ಇವತ್ತಿನ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಕೂಡ ನಮ್ಮನ್ನು ಹಾಳುವಂತಹ ಸರ್ಕಾರಗಳು ಇಡೀ ಶಿಕ್ಷಣವನ್ನೆ ಮಾರಾಟ ಮಾಡಲು ಮುಂದಾಗಿವೆ. ಕರ್ನಾಟಕದಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನ ಮೇಲೆ ಕಾಯಂ ಆಗಿ ಮುಚ್ಚಲು ಮುಂದಾಗಿವೆ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳಾದ ನಾವು ಸಾರ್ವಜನಿಕ ಶಿಕ್ಷಣ ಉಳಿಸಲು, ಬಡ ವಿದ್ಯಾರ್ಥಿಗಳಿಂದ ಶಿಕ್ಷಣ ಕಸಿದುಕೊಳ್ಳುವ ಸರ್ಕಾರದ ನೀತಿಗಳ ವಿರುದ್ಧ ನೇತಾಜಿಯಂತಹ ಮಹಾನ್ ವ್ಯಕ್ತಿಯ ಆದರ್ಶದೊಂದಿಗೆ ಹೋರಾಡಲು ವಿದ್ಯಾರ್ಥಿಗಳು ಒಂದಾಗಿ ಮನ್ನುಗ್ಗ ಬೇಕಿದೆ ಎಂದು ಅವರು ಕರೆ ನೀಡಿದರು.

ಈ ವಿಚಾರ ಸಂಕೀರ್ಣದಲ್ಲಿ AIDSO ವಾಡಿ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ದೇವದುರ್ಗ, ಕಾರ್ಯದರ್ಶಿಗಳಾದ ಗೋವಿಂದ ಯಳವಾರ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here