ಶಾಪಗ್ರಸ್ತ ಜಿಲ್ಲೆಗಳ ವಿಮೋಚನೆ ನಮ್ಮ ಕೈಯಲ್ಲಿ

0
602

ಚಿಂಚೋಳಿ: ನೀರಿದೆ, ಡ್ಯಾಂ, ಸೇತುವೆ, ಕಾಲುವೆ ಇದೆ ಆದರೆ ರೈತರ ಹೊಲಗಳಿಗೆ ನೀರಿಲ್ಲ. ಆಡಳಿತದ ಬೇಜವಾಬ್ದಾರಿ ಮತ್ತು ಅವೈಜ್ಞಾನಿಕ ಹಂಚಿಕೆಯಿಂದ ಬೀದರ್ ಕಲಬುರಗಿ  ಕಲ್ಯಾಣ ಕರ್ನಾಟಕ ಜಿಲ್ಲೆಗಳು ಶಾಪಗ್ರಸ್ತವಾಗಿದ್ದು, ಈ ಶಾಪ ವಿಮೋಚನೆ ನಮ್ಮ ಕೈಯಲ್ಲಿದೆ ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮ ಶೆಟ್ಟಿ ಮುಕ್ಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನ್ನ ದಾತನಿಗೆ ಸಿಗದ ಜೀವಜಲ_ಬೆಣ್ಣೆತೊರ , ಭೀಮಾ ಏತ ನೀರಾವರಿ,  ಅಮರ್ಜಾ ಗಂಢೊರಿನಾಲ,ಕಾರಂಜ,ಚುಳುಕಿ ನಾಲ, ಮುಲ್ಲಾಮರಿ ಮೆಲ್ಧಂಡೆ,ಮುಲ್ಲಾಮರಿ ಕೆಳದಂಡೆ,ಚಂದ್ರಂಪಳ್ಳಿ ಯೋಜನೆಗಳ ಅಣೆಕಟ್ಟುಗಳಲ್ಲಿದ್ದು ಫಲವೇನು? ಇಲ್ಲಿ ಪ್ರಾಕೃತಿಕವಾಗಿ ಹೆಚ್ಚಿನ ಕೊರತೆಗಳಿಲ್ಲ. ಆದರೆ ಆಡಳಿತ ಮತ್ತು ಜನರ ಅಜ್ಞಾನ ಮತ್ತು ಅದಕ್ಷತೆಯ ಕೊರತೆಯಿಂದ ಈ ಭಾಗದ ರೈತರ ಸ್ಥಿತಿ ಗತಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮತ್ತು ಜಾಗೃತಿ ಮೂಡಿಸಲು ಅಂಕಿಅಂಶಗಳ ಸಮೇತ ಪ್ರಯತ್ನ ಮಾಡಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ ವಾದ ಮಾಡಲಾಗುತ್ತಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಮನವರಿಕೆ ಮಾಡೊಕೊಡಲಾಗುತ್ತಿದೆ ಆದರೂ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಸಾರ್ವಜನಿಕ ಜಾಗೃತಿ ಇಲ್ಲಿ ಬಹಳ ಮುಖ್ಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ಇರುವ ನೀರಾವರಿ ಸೌಕರ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಅದನ್ನು ‌ಸದುಪಯೋಗ ಪಡಿಸಿಕೊಂಡರೆ ತೊಗರಿಯ ನಾಡು ಮತ್ತು ಇಲ್ಲಿನ ರೈತರು ಸಮೃದ್ಧವಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಮಹಾ ಜನತೆ ದಯವಿಟ್ಟು ಇಲ್ಲಿನ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಅಧ್ಯಯನ ಮಾಡಿ. ನೀರಿನ ವಿವಿಧ ಮೂಲಗಳ ಬಗ್ಗೆ ತಿಳಿಯಿರಿ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವಾಮೀಜಿಗಳು, ಪತ್ರಕರ್ತರು, ಚಳವಳಿಗಾರರು, ವಕೀಲರು, ಶಿಕ್ಷಕರು ಸೇರಿ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಶಾಶ್ವತ ನೀರಾವರಿ ಸಮಸ್ಯೆ ಬಗೆಹರಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here