ಸುರಪುರ: ರಾಜ್ಯದಲ್ಲಿನ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರ ವೇತನಾನುದಾನಕ್ಕಾಗಿ,ಅತಿಥಿ,ದೈಹಿಕ ಶಿಕ್ಷಕರ ಖಾಯಂ ಸೇವಾ ಭದ್ರತೆಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಮತ್ತು ಶಾಲಾ-ಕಾಲೇಜು ಶಿಕ್ಷಕರ ಸಂಘದ ಮುಖಂಡರಾದ ಕಿರಣಕುಮಾರ ಗುರುವ,ಪ್ರವೀಣಕುಮಾರ ಹಾಗೂ ಶಾಂತಿಕುಮಾರ ತಿಳಿಸಿದ್ದಾರೆ.
ವಿನೂತನ ಹೋರಾಟ ರೂಪಿಸಿ,ಡಿಪ್ಲೋಮಾ,ಇಂಜಿನಿಯರಿಂಗ್ ಮತ್ತು ಐಟಿಐ ನೌಕರರ ಸಿಬ್ಬಂದಿಗಳ ವೇತನಾನುಧಾನಕ್ಕಾಗಿ ಮತ್ತು ವಿವಿಧ ಶೈಕ್ಷಣಿಕ ಬೇಡಿಕೆಗಳಿಗಾಗಿ ಅವರು ಬೀದರ ದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ರವಿವಾರ ಸುರಪುರ ನಗರಕ್ಕೆ ಆಗಮಿಸಿದ್ದರಿಂದ ಮೂರು ಜನ ಪಾದಯಾತ್ರಾರ್ಥಿಗಳಿಗೆ ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ರೂಪ್ಸ್ ಸಂಘದ ಅನೇಕ ಮುಖಂಡರು ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಮ್ಯಾನೇಜಮೆಂಟ್ ಸಂಘದ ಅಧ್ಯಕ್ಷ ಲಂಕೆಪ್ಪ ಕವಲಿ,ಅಪ್ಪಣ್ಣ ಕುಲಕರ್ಣಿ,ಸೋಮಶೇಖರ ಶಾಬಾದಿ,ಶಿವರಾಜ ನಾಯಕ,ಬಲಭೀಮ ನಾಯಕ ದೇವಾಪುರ,ಮಲ್ಲಿಕಾರ್ಜುನ ಕುಲಕರ್ಣಿ,ಕಲ್ಯಾಣಿಕುಮಾರ ಜಾಧವ್ ಸೇರಿದಂತೆ ಅನೇಕ ಭಾಗವಹಿಸಿದ್ದರು.