ಮನಸ್ಸಿನಲ್ಲಿ ಬಸವಣ್ಣನೆಂಬ ಜ್ಯೋತಿ ಹಚ್ಚಿದರೆ ಸುಖ-ಶಾಂತಿ ಸಾಧ್ಯ

0
74

ಶಹಾಬಾದ: ನಿಜವಾದ ಶಾಂತಿ, ಸುಖ, ನೆಮ್ಮದಿ ಸಿಗಬೇಕಾದರೆ ನಮ್ಮ ಮನಸ್ಸಿನಲ್ಲಿ ಬಸವಣ್ಣನೆಂಬ ಜ್ಯೋತಿಯನ್ನು ಹಚ್ಚಿದಾಗ ಮಾತ್ರ ಸಿಗುತ್ತದೆ ಎಂದು ರಾವೂರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಅವರು ರವಿವಾರ ಭಂಕೂರಿನ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗ ಪ್ರತಿಷ್ಠಾಪನದ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಚನ ಸಾಹಿತ್ಯದಲ್ಲಿ ಆಧ್ಯಾತ್ಮ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಮನುಷ್ಯ ಸುಖವನ್ನು ದುಡ್ಡಿನಲ್ಲಿ,ಆಸ್ತಿಯಲ್ಲಿ, ಬಂಗಾರದಲ್ಲಿ, ದೊಡ್ಡ ದೊಡ್ಡ ಬಂಗಲೆಗಳಲ್ಲ್ಲಿ, ವಾಹನಗಳಲ್ಲಿ ಹುಡುಕುತ್ತಿದ್ದಾನೆ.ಆದರೆ ನಿಜವಾದ ಸುಖವೆಂಬುದು ಮಹಾತ್ಮ ನುಡಿಗಳಲ್ಲಿ, ಆಧ್ಯಾತ್ಮಿಕ ಚಿಂತನೆಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಲ್ಲದೇ ಅದರಂತೆ ನಡೆದರೇ ಬದುಕಿನಲ್ಲಿ ಶಾಂತಿ, ಸಮಾಧಾನ ಸಿಗಲು ಸಾಧ್ಯ ಎಂಬುದನ್ನು ಅರಿಯಬೇಕು.ಆದರೆ ನಾವು ಇವುಗಳನ್ನು ಹೊರಗಿನ ವಸ್ತುಗಳಲ್ಲಿ ಹುಡುಕುತ್ತಿದ್ದೆವೆ.ಆದರೆ ಇವು ಹೊರಗೆ ಹುಡುಕುವ ವಸ್ತುಗಳಲ್ಲಿ ಇವು ನಮ್ಮೊಳಗಿರುವ ವಸ್ತುಗಳು. ಬಸವಣ್ಣನವರ ತತ್ವ ಇಡೀ ಮನುಕುಲಕ್ಕೆ ದಾರಿದೀಪ. ಬಸವಣ್ಣನವರ ಮೂಲ ತತ್ವವೆಂದರೆ ಭಕ್ತಿ, ಕಾಯಕ ಮತ್ತು ದಾಸೋಹವನ್ನು ಅಳವಡಿಸಿಕೊಂಡಿರಬೇಕು. ಪ್ರತಿಯೊಬ್ಬರೂ ಭಕ್ತಿವಂತರಾಗಬೇಕು.ಕಾಯಕ ಜೀವಿಗಳಾಗಬೇಕು.ಅಲ್ಲದೇ ದಾಸೋಹಿಗಳಾಗುವುದರ ಜತೆಗೆ ಕಾಯಕ ಮಾಡುವಂತವರಾದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಶಿರಗುಪ್ಪಾದ ಬಸವ ತತ್ವ ಚಿಂತಕ ಬಸವರಾಜ ವೆಂಕಾಟಾಪೂರ ಶರಣರು ಮಾತನಾಡಿ, ಮಣ್ಣು ಕಲ್ಲಾಗಿ, ಕಬ್ಬಿಣವಾಗಿ, ತಾಮ್ರವಾಗಿ, ಚಿನ್ನವಾಗಿ ಪರಿವರ್ತನೆಯಾಗುತ್ತದೆ.ಆದರೆ ಮನುಷ್ಯ ಪರಿವರ್ತನೆಯಾಗದಿದ್ದರೇ ಅವನ ಜೀವನ ವ್ಯರ್ಥವಾಗುತ್ತದೆ.ಜೀವನ ಸಾರ್ಥಕತೆಯಾಗಬೇಕಾದರೆ ಬಸವಾಧಿ ಶರಣರ ತತ್ವಗಳ ಅರಿಯಬೇಕು.ಆ ನಿಟ್ಟಿನಲ್ಲಿ ಸುಮಾರು 40 ವರ್ಷಗಳಿಂದ ಬಸವಾದಿ ಶರಣರ ತತ್ವವನ್ನು ನಾಡಿನೆಲ್ಲೆಡೆ ಪಸರಿಸುವ ಹಾಗೂ ಶಿಕ್ಷಣ ದಾಸೋಹ ಮಾಡುತ್ತಿರುವ ಏಕೈಕ ಸಂಸ್ಥೆಯೆಂದರೆ ಬಸವ ಸಮಿತಿ ಎಂದು ಶ್ಲಾಘಿಸಿದರು.

ಪತ್ರಕರ್ತ ವಾಸುದೇವ ಚವ್ಹಾಣ ಮಾತನಾಡಿ,ಒಳ್ಳೆಯ ಶಿಕ್ಷಣ ಸಂಸ್ಥೆಯನ್ನು ತೆಗೆದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರಲ್ಲಿ ಬಸವಣ್ಣನವರ ತತ್ವಗಳನ್ನು ಬಿತ್ತುವ ಕೆಲಸ ಬಸವ ಸಮಿತಿ ಮಾಡುತ್ತಿರುವುದು ನೋಡಿದರೇ ಸಂತೋಷದಾಯವಾಗಿದೆ ಎಂದು ಹೇಳಿದರು.

ಉದ್ಯಮಿಗಳಾದ ಶರಣಬಸಪ್ಪ ನಂದಿ ಹಾಗೂ ಶಿವರಾಜ ಪಾರಾ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಸೂರ್ಯಕಾಂತ ಕೋಬಾಳ ವೇದಿಕೆಯ ಮೇಲಿದ್ದರು. ಪ್ರವಚನಕಾರ ಸಿದ್ಧೇಶ್ವರ ವಸ್ತ್ರದ್, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮೃತ ಮಾನಕರ್ ನಿರೂಪಿಸಿದರು, ಅಮರಪ್ಪ ಹೀರಾಳ ಸ್ವಾಗತಿಸಿದರು, ರೇವಣಸಿದ್ದಪ್ಪ ಮುಸ್ತಾರಿ ವಂದಿಸಿದರು.

ಬದುಕಿನಲ್ಲಿ ತಾಳ್ಮೆ ಎಂಬುದು ಕಳೆದುಕೊಂಡಾಗ ಸಂಸಾರ ಕುರುಕ್ಷೇತ್ರವಾಗುತ್ತದೆ.ಬದುಕನ್ನು ಸರಿಯಾಗಿ ನೋಡುವ ಅವಶ್ಯಕತೆಯಿದೆ. ಪರಿಸ್ಥಿತಿಯನ್ನು ಬದಲಾಯಿಸುವ ಬದಲು ಮನಸ್ಥಿತಿಯನ್ನು ಬದಲಾವಣೆ ಮಾಡಿದರೆ ಬದುಕಿನಲ್ಲಿ ಶಾಂತಿ, ಸಮಾಧಾನ ಸಿಗಲು ಸಾಧ್ಯ- ಸಿದ್ಧಲಿಂಗ ದೇವರು ರಾವೂರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here