ಕಲಬುರಗಿ: ಕೃಷಿ ವಿಜ್ಞಾನಕೇಂದ್ರ ಹಾಗೂ ಕೃಷಿ ಇಲಾಖೆ ಅಫಜಲಪೂರ ವತಿಯಿಂದ 2022-23ನೇ ಸಾಲಿನ ಹಿಂಗಾರು ಬೆಳೆಗಳಲ್ಲಿಕ್ಷಿಪ್ರ ಸಂಚಾರಿ ಪೀಡೆ ಸಮೀಕ್ಷೆಯ ಕಾರ್ಯಕ್ರಮದ ಅಂಗವಾಗಿ ಅಫಜಲಪೂರತಾಲೂಕಿನ ವಿವಿಧ ಗ್ರಾಮಗಳಾದ ಅತನೂರ್, ಕರ್ಜಗಿ, ಮಣ್ಣೂರ, ಹೊಸೂರ, ಉಡಚಣ, ಚೌಡಾಪೂರ ಮತ್ತು ಬಂಕಲಗಾ ಗ್ರಾಮಗಳ ರೈತರ ವಿವಿಧತೊಗರಿ, ಕಡಲೆ, ಕಬ್ಬು ಮತ್ತು ಹತ್ತಿ ಬೆಳೆಗಳ ಕ್ಷೇತ್ರಗಳಿಗೆ ಇತ್ತೀಚಿಗೆ ಭೇಟಿ ನೀಡಿಕೀಟ ಮತ್ತು ರೋಗಗಳ ಕುರಿತು ಸಮೀಕ್ಷೆಕೈಗೊಂಡು ಇವುಗಳ ಹತೋಟಿ ಕ್ರಮಗಳ ಕುರಿತುತಾಂತ್ರಿಕ ಮಾಹಿತಿಯನ್ನು ಕೃಷಿ ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ, ರವರು ವಿವರಿಸಿದರು.
ತದನಂತರತೊಗರಿ ಹೂವಾಡುವ ಹಂತದಲ್ಲಿ ಪಲ್ಸ್ ಮ್ಯಾಜಿಕ್ ಬಳಕೆ ಮೂಲಕ ಪೋಷಕಾಂಶಗಳ ನಿರ್ವಹಣೆಯನ್ನು ಮತ್ತು ಮಣ್ಣು ಮತ್ತು ನೀರಿನ ಪರೀಕ್ಷೆಯ ಮಹತ್ವವನ್ನು ತಿಳಿಸಿದರು.
ಖರ್ಜಗಿರೈತ ಸಂಪರ್ಕಕೇಂದ್ರದ ಕೃಷಿ ಅಧಿಕಾರಿಧರ್ಮಣ್ಣರವರು ಈ ಕ್ಷೇತ್ರ ಸಂಚಾರಿ ಪೀಡೆ ಸಮೀಕ್ಷೆಕಾರ್ಯಕ್ರಮವು ನವೆಂಬರ್ ಮತ್ತುಡಿಸೆಂಬರ್ ತಿಂಗಳ ಪ್ರತಿಗುರುವಾರ ನಡೆಯಲಿದ್ದು, ಕೃಷಿ ವಿಜ್ಞಾನಿಗಳು ಭೇಟಿ ನೀಡಿಅಗತ್ಯ ತಾಂತ್ರಿಕತೆಗಳನ್ನು ನೀಡಲಿದ್ದಾರೆ.
ಹೀಗಾಗಿ ರೈತರುಇದರ ಸದುಪಯೋಗ ಪಡೆಸಿಕೊಳ್ಳಲು ಸೂಚಿಸಿದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಆನಂದಅವರಾದ, ಸಿದ್ರಾಮ, ಅಭಿಷೇಕ್ ಮತ್ತು ಗ್ರಾಮಗಳ ಅನೇಕ ರೈತರು ಹಾಜರಿದ್ದುಕಾರ್ಯಕ್ರಮದ ಸದುಪಯೋಗ ಪಡೆಸಿಕೊಂಡರು.