ಕಲಬುರಗಿ: ಪರಿಸರ ವ್ಯವಸ್ಥೆಯು ಕೇವಲ ಮಾನವನಿಗೆ ಅಷ್ಟೇ ಅಲ್ಲ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಜೀವನಾಧರವಾಗಿದೆ. ಮಾನವನಿಗೆ ಬದುಕಲು ಅಗತ್ಯವಿರುವ ಆಹಾರ, ಆಶ್ರಯ, ನೀರು, ಶುದ್ದ ಗಾಳಿ ಇದು ಪರಿಸರದಿಂದಲೇ ಲಭಿಸುತ್ತದೆ. ಇಂತಹ ಪರಿಸರದ ಸುಸ್ಥಿರತೆ ಕಾಪಾಡಿಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಲ್ಲಮಪ್ರಭು ಗುಡ್ಡಾ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ತರಬೇತಿ ಇಲಾಖೆಯ ಸಹಯೋಗದೊಂದಿಗೆ 30 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ಆಯೋಜಿಸಲಾದ ಮಾರ್ಗದರ್ಶಿ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ ಮಾತನಾಡಿ ರಾಜ್ಯದ 10 ರಿಂದ 17 ವಯೋಮಾನದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ, ಅವರ ಭೌದ್ಧಿಕ ಅಭಿವೃದ್ಧಿಯ ಸಮಗ್ರ ಬೆಳವಣಿಗೆಗೆ ಅವಕಾಶ ನೀಡುವ ಹಾಗೂ ಅವರನ್ನು ಭವಿಷ್ಯದ ಬಾಲವಿಜ್ಞಾನಿಗಳನ್ನಾಗಿ ರೂಪಿಸಲು ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಆಯೋಜಿಸಲಾಗುತ್ತಿದ್ದು, ಭವಿಷ್ಯದ ಬಾಲ ವಿಜ್ಞಾನಿಗಳನ್ನು ರೂಪಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ. ಕಲಬುರಗಿ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶ್ರೀವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಕವಿರಾಜ ಪಾಟೀಲ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜಾ ಸಮರಸೇನ ಮೋದಿ, ಶರಣÀಬಸವೇಶ್ವರ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ ಶೆಟ್ಟಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಗನಾಥ್ ಹಲಮಡಗಿ, ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಶೈಕ್ಷಣಿಕ ಡೀನ್ ಡಾ. ರಾಜಕುಮಾರ ಮಾಲಿಪಾಟೀಲ, ವಿಜ್ಞಾನ ಶಿಕ್ಷಕಿ ಸುರೇಖಾ ಜಗನಾÀಥ್, ಲತಾ ಕೆರೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಮಹೇಶ ದೇವಣಿ ಸ್ವಾಗತಿಸಿದರು. ಪ್ರವೀಣ ಭದ್ರಿ ವಂದಿಸಿದರು.
‘ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳೋಣ ಎಂಬ ಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಯಿತು. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಮಟ್ಟದ ಸ್ಪರ್ಧೆಯು ಡಿಸೆಂಬರ್ ತಿಂಗಳ ಮೊದಲ ವಾರದೊಳಗೆ ರಾಜ್ಯಾದ್ಯಂತ ಜರುಗಲಿದ್ದು ಪ್ರತೀ ಜಿಲ್ಲೆಯಿಂದ 10 ತಂಡಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆಮಾಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯು ಡಿಸೆಂಬರ್ ಮದ್ಯಂತರದಲ್ಲಿ ಜರುಗಲಿದ್ದು ರಾಜ್ಯದಿಂದ 30 ತಂಡಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆಮಾಡಲಾಗುವುದು. ರಾಷ್ಟ್ರಮಟ್ಟದ ಸ್ಪರ್ದೆಯು ಡಿ.27-31 ರ ವರೆಗೆ ಗುಜರಾತ ರಾಜ್ಯದಲ್ಲಿ ಜರುಗಲಿದೆ.