ಜಾಗತೀಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಲೋಹಾರ

0
285

ಆಳಂದ: ಜಾಗತೀಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಮುಖಂಡ ರಮೇಶ ಲೋಹಾರ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಪಟ್ಟಣದಲ್ಲಿ ಔಪಚಾರಿಕೆ ಸಭೆಯಲ್ಲಿ ಜಾಗತೀಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ, ವಾಸ್ತು ಶಿಲ್ಪಿ ಪಿ.ಎಸ್. ಮಹಾಗಾಂವಕರ್ ಅವರು, ರಮೇಶ ಲೋಹಾರ ಅವರನ್ನು ಅಧ್ಯಕ್ಷರನ್ನಾಗಿ ಪ್ರಕಟಿಸಿದರು.
ಈ ಹುದ್ದೆಯ ಜವಾಬ್ದಾರಿ ನೀಡಿ ಸನ್ಮಾನಿಸಿದ ಬಳಿಕ ಇನ್ನೂಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಮಹಾಸಭಾದ ತತ್ವ ಸಿದ್ಧಾಂತಗಳನ್ನು ಚಾಚೂತಪ್ಪದೆ ಕಾರ್ಯ ಕಲಾಪಗಳನ್ನು ಮುನ್ನೆಡೆಸಿಕೊಂಡು ಹೋಗಬೇಕು ಎಂದು ನೂತನ ಅಧ್ಯಕ್ಷರಿಗೆ ಜಿಲ್ಲಾಧ್ಯಕ್ಷ ಮಹಾಗಾಂವಕರ್ ಸಲಹೆ ನೀಡಿದರು.

Contact Your\'s Advertisement; 9902492681

ಲಿಂಗಾಯತ ಮಹಾಸಭಾ ಯಾರ ವಿರುದ್ಧವೂ ಅಲ್ಲ ಮತ್ತು ಯಾರ ಪರವೂ ಅಲ್ಲ ಇದೊಂದು ಸ್ವತಂತ್ರವಾದ ಸಂಘಟನೆಯಾಗಿದೆ. ಲಿಂಗಾಯತ ಎಲ್ಲ ಒಳಪಂಗಡಿದವರನ್ನು ಒಂದಾಗಿಸಿಕೊಂಡು ಬಸವಾದಿ ಶರಣರ ತತ್ವ ಸಿದ್ಧಾಂತ ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟ ಹಾಗೂ ಜನಾಂಗಕ್ಕಾಗಿ ಸಾಮಾಜಿಕ ನ್ಯಾಯದ ಪರ ಸಂವಿಧಾನಿಕವಾಗಿ ದೊರೆಯಬೇಕಾದ ಹಕ್ಕುಗಳಿಗಾಗಿ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ರಮೇಶ ಲೋಹಾರ ಅವರು, ಮುಂದಿನ ದಿನಗಳಲ್ಲಿ ಎಲ್ಲ ಒಳಪಂಗಡ ಮುಖಂಡರನ್ನೊಳಗೊಂಡು ತಾಲೂಕು ಮಟ್ಟದ ಸಭೆ ಕರೆದು ಎಲ್ಲರ ಸಲಹೆ ಸೂಚನೆಗಳನ್ನು ಪೆಡದು ಇನ್ನೂಳಿದ ಪದಾಧಿಕಾರಿಗಳನ್ನು ನೇಮಕ ಹಾಗೂ ಮುಂದಿನ ಕಾರ್ಯ ಚಟುವಟಿಕೆಗೆ ಶ್ರಮಿಸಲಾಗುವುದು ಎಂದರು.
ಧರ್ಮ ಪ್ರಚಾರಕ ಧರ್ಮಣ್ಣಾ ಪೂಜಾರಿ ಅವರು ಮಾತನಾಡಿ, ಯಾವುದೇ ಹುದ್ದೆಗಳು ಶಾಶ್ವತವಲ್ಲ. ಜನಾನುರಾಗಿಯಾಗಿ ಕರ್ತವ್ಯ ಮತ್ತು ಶರಣ ಧರ್ಮದ ಕಾರ್ಯವನ್ನು ಮುನ್ನೆಡೆಸಲು ಕಾರ್ಯಪಡೆ ಸಿದ್ಧಗೊಳ್ಳಬೇಕು. ಇದಕ್ಕೆ ಎಲ್ಲರು ಬಿಚ್ಚಿ ಮನಸ್ಸಿನಿಂದ ದುಡಿಯಲು ಮುಂದಾಗಬೇಕು ಎಂದರು.

ಜಿಲ್ಲಾ ಘಟಕದ ಇನ್ನೊರ್ವ ಹಿರಿಯ ಮುಖಂಡ ವಿಶ್ವನಾಥ ದೊಣ್ಣೂರ, ಇಂಜಿನಿಯರ ಶರಣ ಎಸ್. ಆಳಂದ, ಕಲ್ಯಾಣಿ ತುಕಾಣೆ, ಬಂಡುರಾಜ ಮುನ್ನೋಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here