ಕಲಬುರಗಿ: ಹಜರತ್ ಹಸನ್ ಷಾ ಖಾದ್ರಿ ದರ್ಗಾದ 36ನೇ ಉರುಸ್‍ | ಕೋಮು ಸಾಮರಸ್ಯ ಕಾರ್ಯಕ್ರಮ

0
25

ಕಲಬುರಗಿ: ಮಾನವರೆಲ್ಲರೂ ಒಂದೆಯಾಗಿದ್ದು, ಹುಟ್ಟಿದ ಧರ್ಮ, ಜಾತಿಗಳ ಆಧಾರದ ಮೇಲೆ ಮೇಲು-ಕೀಳು ಭಾವನೆಗಳು ಮನುಷ್ಯನ ವ್ಯಕ್ತಿತ್ವ ಕುಗ್ಗಿಸುತ್ತವೆ. ಇವೆಲ್ಲವುಗಳನ್ನು ಮೀರಿ ಉನ್ನತವಾದ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಬೇಕು. ಎಲ್ಲಾ ಮಹಾತ್ಮರು ಸಮಾಜಕ್ಕೆ ನೀಡಿದ ವಿಶ್ವಭ್ರಾತೃತ್ವ ಮೌಲ್ಯಗಳು ಒಂದೆಯಾಗಿದ್ದು, ಅವುಗಳನ್ನು ತಿಳಿದುಕೊಳ್ಳುವಲ್ಲಿ ಎಡವಿದ್ದರಿಂದ ಆಗಾಗ್ಗೆ ಕೋಮು ಗಲಭೆಗಳಾಗುತ್ತವೆ. ಆದ್ದರಿಂದ ದೇಶದಲ್ಲಿರುವ ಪ್ರತಿಯೊಬ್ಬರು ನಾವೆಲ್ಲರು ಭಾರತಾಂಬೆಯ ಮಕ್ಕಳು ಒಂದೇ ಎಂಬ ಸಾಮರಸ್ಯ ಭಾವದಿಂದ ಬದುಕುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸೈಯದ್ ಷಾ ಮುರ್ತುಜಾ ಖಾದ್ರಿ ಅಲ್ಮಾರೋ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಹಜರತ್ ಹಸನ್ ಷಾ ಖಾದ್ರಿ ದರ್ಗಾದ 36ನೇ ಉರುಸ್’ನ ನಿಮಿತ್ಯ ‘ಖಾದ್ರಿ ದರ್ಗಾ ಸಮಿತಿ’ ವತಿಯಿಂದ ಬುಧವಾರ ಸಂಜೆ ಏರ್ಪಡಿಲಾಗಿದ್ದ ಕೋಮು ಸಾಮರಸ್ಯ ಕಾರ್ಯಕ್ರಮ : ವಿವಿಧ ಧರ್ಮಗಳ ಮುಖಂಡರು, ಸಮಾಜ ಸೇವಕರಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ದೇವನೊಬ್ಬ, ನಾಮ ಹಲವು. ಜಾತಿ, ಧರ್ಮಗಳ ಆಧಾರದ ಮೇಲೆ ಕಲಹ, ಜಗಳವಾಡಿದರೆ ಯಾವುದೇ ಪ್ರಯೋಜನೆಯಿಲ್ಲ. ಎಲ್ಲರೂ ಜೊತೆಗೂಡಿ ಸಾಗಬೇಕು. ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಸಿಕೊಂಡು ಹೋಗಬೇಕು. ಎಲ್ಲಾ ಧರ್ಮಗಳ ತಿರುಳು ಒಂದೆಯಾಗಿದ್ದು, ಅದನ್ನು ಅರಿಯದೆ ಕಚ್ಚಾಟದಲ್ಲಿ ತೊಡಗಿರುವುದು ವಿಷಾದನೀಯ ಸಂಗತಿಯಾಗಿದೆ. ಉರುಸ್ ನಿಮಿತ್ಯ ಪ್ರತಿವರ್ಷ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಸೇವಕ ನವಾಬ ಖಾನ್, ಉರುಸ್ ನಿಮಿತ್ಯ ಪ್ರತಿವರ್ಷ ನಾವು ವಿವಿಧ ಧಾರ್ಮಿಕ ಮುಖಂಡರನ್ನು ಆಹ್ವಾನಿಸಿ ಸತ್ಕರಿಸಲಾಗುತ್ತದೆ. ಇದರಿಂದ ಪರಸ್ಪರ ಸ್ನೇಹ, ಭ್ರಾತೃತ್ವಭಾವನೆ ಬೆಳೆಯಲು, ಸಹ ಜೀವನ ಸಾಗಿಸಲು ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜೀರಬಾಬಾ ಸಜ್ಜಾದ್ ನಸೀನ್, ಸೈಯದ್ ಷಾ ಇಜಫರ್‍ಬಾದ್ರಿ ಅಲ್ಮಾರೋ, ಜಾಫರಬಾಬಾ, ಸೈಯದ್ ಷಾ ಮಜರ್ ಖಾದ್ರಿ ಅಲ್ಮಾರೋ, ಮೋಹಸಿನ್‍ಬಾಬಾ, ಅರುಣಕುಮಾರ ಪಾಟೀಲ, ಬಸವರಾಜ ಬೆಣ್ಣೆಶಿರೂರ್ ನೀಲೂರ್, ಪರಮೇಶ್ವರ ಹಳೆಜೋಳ, ನಿಜಲಿಂಗಪ್ಪ ಹಳೆಮನಿ, ಅಶೋಕ ಕದಮ್, ಪಿಎಸ್‍ಐ ಮಹೇಶ್, ಶರಣಗೌಡ ಪಾಟೀಲ, ಚಂದ್ರಕಾಂತ ಬಿರಾದಾರ, ಶಿವಯೋಗಪ್ಪ ಬಿರಾದಾರ ಬಾಳ್ಳಿ, ಪ್ರಭುಲಿಂಗ ಮುಲಗೆ, ಭೀಮರಾವ ಬಿರಾದಾರ, ಅಂಬಾರಾಯ ಬಿರಾದಾರ, ಮಹಾಂತೇಶ ಬಿರಾದಾರ ಸೇರಿದಂತೆ ಸುತ್ತ-ಮುತ್ತಲಿನ ಬಡಾವಣೆ, ನಗರ, ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here