ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ ಮತ್ತು ಮೇಘನಾ ಪ್ರಕಾಶನ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರ ‘ಕೊಪ್ಪಳ ಸ್ಥಳನಾಮ; ಒಂದು ವಿಶ್ಲೇಷಣೆ’ ಎಂಬ ಸಂಶೋಧನಾ ಕೃತಿಯು ನ.೧೮ರಂದು ಕಾಲೇಜು ಆವರಣದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಕೃತಿಯನ್ನು ಕಾಲೇಜಿನ ಭದ್ರತಾ ಕಾವಲುಗಾರರಾದ ಗವಿಸಿದ್ಧಪ್ಪ ಕಡೆಮನಿಯವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದಡಾ. ಬಸವರಾಜ ಪೂಜಾರರವರು ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚನ್ನಬಸವ ಅವರು ವಹಿಸಿಕೊಳ್ಳಲಿದ್ದಾರೆ. ಕೃತಿಯ ಪರಿಚಯವನ್ನು ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರಾಜು ಹೊಸಮನಿಯವರು ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ವಿರೇಶಕುಮಾರ ಹಾಗೂ ಪ್ರಾಧ್ಯಾಪಕರುಗಳಾದ ಡಾ.ದಯಾನಂದ ಸಾಳುಂಕೆ, ಡಾ. ಶರಣಬಸಪ್ಪ ಬಿಳಿಎಲಿ, ಡಾ.ಕರಿಬಸವೇಶ್ವರ ಬಿ. ಮತ್ತು ಡಾ.ಬಾಳಪ್ಪ ತಳವಾರ ಅವರು ಭಾಗವಹಿಸಲಿದ್ದಾರೆಂದು ಮೇಘನಾ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಮಂಜುಳಾ ಕೊಟ್ನೆಕಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.