ಶಿಕ್ಷಕರಿಗೂ ಸಹಪಠ್ಯ ಚಟುವಟಿಕೆ ಅಗತ್ಯ : ಬಿಇಓ ಸಿದ್ಧವೀರಯ್ಯ

0
108

ಶಹಾಬಾದ: ವರ್ಷವಿಡಿ ತರಗತಿಗಳ ಬೋಧನೆಯಲ್ಲಿ ಮಕ್ಕಳ ಜೊತೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೂ ಸಹಪಟ್ಟ ಚಟುವಟಿಕೆ ಹಮ್ಮಿಕೊಳ್ಳುವುದು ಸೂಕ್ತ ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಅಭಿಪ್ರಾಯ ಪಟ್ಟರು.
ಅವರು ಶುಕ್ರವಾರ ತಾಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಹಮ್ಮಿಕೊಂಡಿದ್ದ ೨೦೨೨ ೨೩ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪ್ರತಿಭೆ ಹೊರ ಹಾಕುತ್ತಿರುವ ಸಹ ಶಿಕ್ಷಕರು ಈ ವೇದಿಕೆ ಮೂಲಕ ತಮ್ಮಲ್ಲಿರುವ ಪ್ರತಿಭೆ ಹೊರಹಾಕಬಹುದು. ಶಿಕ್ಷಕರಲ್ಲಿ ಹುದುಗಿರುವ ವಿವಿಧ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರ ಕಲ್ಯಾಣ ನಿಧಿಯು ಉತ್ತಮ ಅವಕಾಶ ಕಲ್ಪಿಸಿದೆ.ಪ್ರಸಕ್ತ ವರ್ಷ ವಿವಿಧಸ್ಪರ್ಧೆ ಏರ್ಪಡಿಸಿರುವುದರಿಂದ ವೈವಿಧ್ಯ ಮೂಡಿದಂತಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಶಿಕ್ಷಕರು ತಮ್ಮ ಶಾಲೆಗಳಲ್ಲೂ ಚಟುವಟಿಕೆ ಏರ್ಪಡಿಸುವ ಸಾಮರ್ಥ್ಯ ಹೊಂದಲಿದ್ದಾರೆ ಎಂದರು.

Contact Your\'s Advertisement; 9902492681

ಚಿತ್ತಾಪೂರ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೊಂಡಗಿ,ಪ್ರಧಾನಕಾರ್ಯದರ್ಶಿ ಬಸಪ್ಪ. ಎಂ, ಕಾಳಗಿ ಕ.ರಾ.ಪ್ರೌ.ಶಾ.ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಶಾಸ್ತಿç, ಕಾಳಗಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ,ಕಾರ್ಯದರ್ಶಿ ಸಂತೋಷ ಕಲಮೂಡಕರ್,ಪ್ರಾ.ಶಾ.ಶಿ.ಸಂ ಕಾರ್ಯದರ್ಶಿ ಸಂತೋಷ ಸಲಗರ್,ಚಿತ್ತಾಪೂರ ಪ್ರಾ.ಶಾ.ಶಿ.ಸಂ.ತಾಲೂಕಾಧ್ಯಕ್ಷ ಶಿವಾನಂದ ನಾಲವಾರ,ಕಾರ್ಯದರ್ಶಿ ಅಬ್ದುಲ್ ಸಲಿಂ,ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರರೆಡ್ಡಿ ದುಗ್ನೂರ್, ಬಾಲಕರ ಪ್ರೌಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ, ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮದ ನೋಡಲ್ ಅಧಿಕಾರಿ ವೆಂಕಟರೆಡ್ಡಿ, ಶಿಕ್ಷಣ ಸಂಯೋಜಕರಾದ ಶ್ರೀಧರ ರಾಠೋಡ, ಶರಣಪ್ಪ ಅಬ್ಬಿಗೇರಿ ಸೇರಿದಂತೆ ಸ್ಪರ್ಧೆಯ ನಿರ್ಣಾಯಕರು ಇದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿದ್ದರು.ಅಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ನಗದು ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಶಿಕ್ಷಣ ಸಂಯೋಜಕ ಶರಣಪ್ಪ ಅಬ್ಬಿಗೇರಿ ನಿರೂಪಿಸಿದರು, ಮಲ್ಲಿಕಾರ್ಜುನ ಶಿವಣಗಿ ಸ.ಶಿ ಪ್ರಾರ್ಥಿಸಿದರು, ವೆಂಕಟರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು, ಸಂತೋಷ ಕಲಮೂಡಕರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here