ಕನ್ನಡಿಗರಲ್ಲಿನ ತಾರತಮ್ಯ ಹೊಗಲಾಡಿಸಿ

0
10

ಭಾಲ್ಕಿ: ಕನ್ನಡ ನಾಡಿನ ಶಾಲಾ ಮಕ್ಕಳಲ್ಲಿ ಖಾಸಗಿ ಮತ್ತು ಸರ್ಕಾರಿ ಎಂಬ ತಾರತಮ್ಯ ಹೋಗಲಾಡಿಸಬೇಕು. ಎಲ್ಲಾ ಮಕ್ಕಳಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಚಂದ್ರಕಲಾ ಡಿಗ್ಗೆ ಅಭಿಪ್ರಾಯಪಟ್ಟರು.

ಭಾಲ್ಕಿಯ ಸದ್ಗುರು ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕಮಹಾದೇವಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಅಂಕುಶ ಢೋಲೆ ಮಾತನಾಡಿ, ಗುಣಮಟ್ಟದ ಕನ್ನಡ ಮತ್ತು ಸಂಸ್ಕøತಿ ಬೆಳೆಯಬೇಕಾದರೆ ಖಾಸಗಿಯವರ ಸಹಭಾಗಿತ್ವದ ಅವಶ್ಯಕತೆಯೂ ಇದೆ ಎಂದು ಪ್ರತಿಪಾದಿಸಿದರು.

Contact Your\'s Advertisement; 9902492681

ಕೊಪ್ಪಳದ ಸಾಹಿತಿ ಶಂಕುಂತಲಾ ಸಾಲ್ಮನಿ, ಪತ್ರಕರ್ತ ಸೋಮನಾಥ ಮುದ್ದಾ, ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಕಸಾಪ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಿತಾ ಮಮ್ಮಾ, ಸದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷ ಅಕ್ಷಯ್ ಮುದ್ದಾ, ಸಿಆರ್‍ಪಿ ಅರ್ಚನಾ ಪವಾರ್, ಶಾಂತಮ್ಮ ಮೋರೆ, ಚಂದ್ರಕಾಂತ ತಳವಾಡೆ, ಅಡಳಿತಾಧಿಕಾರಿ ವೀರಣ್ಣ ಪರಸಣ್ಣೆ, ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಪಂಕಜಾ ಅಳ್ಳೆ, ನಾಗವೇಣಿ ಗೋಗಿ, ದಯಾಳ್ ದಂಡಿನ್, ಬಸವಾಂಜಲಿ ಸುತಾರ್, ಮುಂತಾದವರು ಇದ್ದರು.

ರಾಜಕುಮಾರ ಮೇತ್ರೆ ಸ್ವಾಗತಿಸಿದರು. ವೀರಣ್ಣ ಪರಸಣ್ಣೆ ನಿರ್ವಹಿಸಿದರು. ಕನ್ಯಾಕುಮಾರಿ ಯಾಲಾ ವಂದಿಸಿದರು. ಮಕ್ಕಳಿಂದ ನಡೆದ ಕನ್ನಡ ಕಾರ್ಯಕ್ರಮಗಳು ಗಮನ ಸೆಳೆದವು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here