ಕನಸುಗಳ ಬಿತ್ತೋಣ ಕಾರ್ಯಕ್ರಮಕ್ಕೆ ಡಾ.ಭೀಮಣ್ಣ ಮೇಟಿ ಚಾಲನೆ

0
14

ದೋರನಹಳ್ಳಿ : ಇಂದಿನ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯಶಸ್ಸು ಪಡೆಯುವ ಮೂಲಕ ಉನ್ನತ ಹುದ್ದೆಗೆಆಯ್ಕೆಯಾಗಬೇಕುಎಂದುಡಿ.ಡಿ.ಯು ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ ತಿಳಿಸಿದರು.

ದೋರನಹಳ್ಳಿಯ ಸ್ವತಂತ್ರ ಪದವಿ ಪೂರ್ವಕಾಲೇಜಿನಲ್ಲಿಡಾ.ಭೀಮಣ್ಣ ಮೇಟಿ ಪೌಂಡೇಶನ ವತಿಯಿಂದ ನಡೆದ “ಕನಸುಗಳ ಬಿತ್ತೋಣ “ಕಾರ್ಯಕ್ರಮಕ್ಕೆಡಿ.ಡಿ.ಯು ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಇಂದಿನ ಗ್ರಾಮೀಣ ಪ್ರದೇಶದ ಮಕ್ಕಳು ಸಮಯಕ್ಕೆ ಮತ್ತು ಅಧ್ಯಯನದಕಡೆಗೆ ಹೆಚ್ಚು ಮಹತ್ವ ನೀಡಬೇಕು. ಭವಿಷ್ಯದಲ್ಲಿ ಏನಾಗಬೇಕೆನ್ನುವುದರ ಕುರಿತು ಮನಸ್ಸಿನಲ್ಲಿ ನಿಚ್ಚಳವಾದ ಕನಸುಗಳಿಗೆ ಬಿತ್ತಬೇಕು. ಆ ನಿಟ್ಟಿನಲ್ಲಿ ಕನಸುಗಳ ನನಸು ಮಾಡುವ ಹಾದಿಯಲ್ಲಿ ಸತತ ಪರಿಶ್ರಮದ ಮೂಲಕ ಗುರಿತಲುಪಿದಾಗ ಮಾತ್ರ ಸಾಧನೆ ನಮ್ಮದಾಗುತ್ತದೆಎಂದು ಹೇಳಿದರು.

ಜಿಲ್ಲೆಯಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿಒದಗಿಸಲುಡಾ.ಭೀಮಣ್ಣ ಮೇಟಿ ಫೌಂಡೇಶನ್‍ಇಂತಹ ಕನಸುಗಳ ಬಿತ್ತೋಣ ಹೊಸ ಚಿಂತನೆಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕೆಂದು ಹಳಿದರು.

ಧಾರವಾಡದ ಮೇರು ಸ್ಪರ್ಧಾಅಕಾಡೆಮಿಯ ನಿರ್ದೇಶಕಡಾ.ರುದ್ರೇಶ ಮೇಟಿಯವರು ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSಅ ಮತ್ತು ಏPSಅ ಪರೀಕ್ಷೆಗೆಇರುವಅಧ್ಯಯನ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಜೊತೆಗೆಅಧ್ಯಾಯನದ ವಿಧಾನಗಳು ತಿಳಿಸಿ ಹೇಳಿದರು.

ಬಳ್ಳಾರಿಯ ಸಂಪನ್ಮೂಲ ಉಪನ್ಯಾಸಕ ಮಲ್ಲಿಕಾರ್ಜುನಕಾಡಂಗೇರಾಅವರು ಮಾತನಾಡಿ ವಿದ್ಯಾರ್ಥಿಗಳು ಕನಸುಗಳಿಲ್ಲದೆ ಅಧ್ಯಯನ ಮಾಡದೆ ಭರವಸೆಯ ಕನಸುಗಳು ಇಟ್ಟುಗೊಂಡು ಸ್ಪರ್ಧಾತ್ಮಕ ಪರೀಕ್ಷೆಗೆಳಿಗೆ ತಯಾರಿ ನಡೆಸಬೇಕು . ಬದುಕಿನಲ್ಲಿ ಭರವಸೆಯ ಕನಸುಗಳಿದ್ದಾಗಲೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮಹೇಶ ಪತ್ತಾರ, ಉಪನ್ಯಾಸಕರಾದ ಎಮ್.ಡಿ.ಪಾಶಾ.ಶರಣ ಬಸವ ಹಿರೇಮಠ, ಮಲ್ಲಿಕಾರ್ಜುನ ಬಿಳಾರ,ಸಂಜೀವ ರೆಡ್ಟಿ, ಪ್ರತಿಭಾ,ಕವಿತಾ ಮುಂತಾದ ಉಪನ್ಯಾಸಕರಿದ್ದರು.

ಉಪನ್ಯಾಸಕಿ ನಿರ್ಮಲಾ ಪೂಜಾರಿ ನಿರೂಪಿಸಿದರು. ಚೈತ್ರಾ ಪೆÇೀಲಿಸ್ ಪೆÇೀಟಿಲ್ ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here